ಬೆಂಗಳೂರು: ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ತಮ್ಮ ಮಗನ ಸರ್ಕಾರ ಬೀಳಿಸಿದ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಅನ್ನೋ ಮೂಲಕ 2023ರ ಚುನಾವಣೆಯಲ್ಲಿ ಮೈತ್ರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪೌರತ್ವ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ದೇವೇಗೌಡರು ಮತ್ತೆ ಅಧಿಕಾರ ಹಿಡಿಯಲು ಒಂದಾಗಿ ಅಂತ ಕರೆ ನೀಡಿದ್ದಾರೆ.
Advertisement
Advertisement
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ದೇವೇಗೌಡರು ಮತ್ತೆ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಒಗ್ಗಟ್ಟು ಮೂಲಕ ಮುಂದಿನ ಚುನಾವಣೆ ಒಟ್ಟಾಗಿ ಎದುರಿಸೋಣ ಅನ್ನೋ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಿಂದೆ ನಡೆದ ಎಲ್ಲಾ ಘಟನೆಗಳನ್ನ ಮರೆಯೋಣ. ನಾವೆಲ್ಲ ಒಟ್ಟಾಗಿ ಹೋಗೋಣ ಅಂತ ಕರೆ ಕೊಟ್ಟರು. ಅಲ್ಲದೆ ನಾನೇ ಎಲ್ಲರ ಮನೆಗೆ ಹೋಗ್ತೀನಿ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗೋಣ ಅಂತ ಸಲಹೆ ನೀಡಿದ್ದಾರೆ.
Advertisement
ಬಿಜೆಪಿ ದೂರ ಇಡಲು ನಾವೆಲ್ಲ ಒಂದಾಗಬೇಕು. ನಾವು ಒಂದಾದರೆ ಗೆಲುವು ನಮ್ಮದೆ ಆಗುತ್ತದೆ. ದೇಶದ ಒಳಿತಿಗಾಗಿ ನಾನೇ ಎಲ್ಲರ ಮನೆ ಬಾಗಿಲಿಗೆ ಹೋಗ್ತೀನಿ. ಒಟ್ಟಾಗಿ ಜಾತ್ಯಾತೀತ ಶಕ್ತಿಗಳು ಒಂದಾಗಲಿ ಎಂದು ಕರೆ ಕೊಟ್ಟಿದ್ದಾರೆ.