ಮೆಟ್ರೋ ಪ್ರಯಾಣಿಕರಿಗೆ ಗುಡ್‍ನ್ಯೂಸ್- ಇಂದಿನಿಂದ ಹೆಚ್ಚುವರಿ ಸರ್ವಿಸ್

Public TV
1 Min Read
NAMMA METRO 4

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ಪ್ರಮುಖ ಸಂಚಾರ ನಾಡಿ ಅಂದ್ರೆ ಅದು ನಮ್ಮ ಮೆಟ್ರೋ (Metro). ನಮ್ಮ ಮೆಟ್ರೋದಲ್ಲಿ ದಿನನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸತ್ತಾರೆ. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ದಿನದ ಪೀಕ್ ಹವರ್‌ನಲ್ಲಿ ಪ್ರಾಯೋಗಿಕವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚುವರಿ ಸರ್ವಿಸ್ ನೀಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ನೇರಳೆ ಮಾರ್ಗದಲ್ಲಿ ವಾರದ 5 ದಿನಗಳಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ಬಗ್ಗೆ ಮಾಹಿತಿ ನೀಡಿದೆ.

ಮೆಜೆಸ್ಟಿಕ್ ನಿಲ್ದಾಣದಿಂದ ಎಂಜಿ ರೋಡ್‍ವರೆಗೆ ಹೆಚ್ಚುವರಿ ಕಾರ್ಯಾಚರಣೆ ಮಾಡಲು ಇಂದಿನಿಂದ ನಿರ್ಧರಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ಹೆಚ್ಚುವರಿ ಟ್ರಿಪ್ ಇರಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ. ಬೈಯಪ್ಪನಹಳ್ಳಿಗೆ ತೆರಳುವವರು ಎಂ.ಜಿ ರೋಡ್ ನಿಲ್ದಾಣದಲ್ಲಿ ಇಳಿದು ಮತ್ತೊಂದು ಮೆಟ್ರೋ ರೈಲು ಹತ್ತಿ ತೆರಳಬಹುದು. ಇದನ್ನೂ ಓದಿ: ಹೆಚ್‍ಡಿಕೆ ಶೀಘ್ರ ಗುಣಮುಖರಾಗಲೆಂದು ಅಭಿಮಾನಿಯಿಂದ ಉರುಳು ಸೇವೆ

ಒಟ್ಟಿನಲ್ಲಿ ಹೆಚ್ಚುವರಿ ಮೆಟ್ರೋ ಸೇವೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Web Stories

Share This Article