ಬೆಂಗಳೂರು: ಬಾಂಗ್ಲಾದೇಶ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ 9 ಮಂದಿಯೂ ದೋಷಿಗಳು ಎಂದು ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಎ1 ಸೋಭುಜ್ ಶೇಖ್, ಎ2 ರಿದಯ್ ಬಾಬು, ಎ3 ರಕಿಬುಲ್ ಇಸ್ಲಾಂ ಸಾಗರ್, ಎ4 ಮೊಹಮ್ಮದ್ ಬಾಬು, ಎ5 ರಫ್ಸಾನ ಮಂಡಲ್, ಎ6 ತಾನಿಯಾ.ಲೇ, ಎ7 ದಾಲಿಮ್, ಎ8 ಅಜೀಂ ಎ9 ಜಮಾಲ್ ದೋಷಿಗಳು ಎಂದು 54ನೇ ಸಿಸಿಹೆಚ್ ಕೋರ್ಟ್ ತೀರ್ಪು ನೀಡಿದೆ.
Advertisement
Advertisement
ಇಬ್ಬರನ್ನು ಹೊರತು ಪಡಿಸಿ ಉಳಿದ ಎಲ್ಲಾ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಎ6 ತಾನಿಯಾಗೆ 20 ವರ್ಷ ಜೈಲು ಶಿಕ್ಷೆ, ಪ್ರಕರಣದಲ್ಲಿ 9ನೇ ಅಪರಾಧಿ ಜಮಾಲ್‌ಗೆ ವಿದೇಶಿಯರ ಕಾಯ್ದೆಯ ಅಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಪಶುವೈದ್ಯೆ ಮೇಲೆ ಗ್ಯಾಂಗ್‍ರೇಪ್‍ಗೈದ ಆರೋಪಿಗಳ ಎನ್‍ಕೌಂಟರ್ ಉದ್ದೇಶಪೂರ್ವಕ – ಸುಪ್ರೀಂ ಆಯೋಗ
Advertisement
Advertisement
ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2021ರ ಮೇ 18 ರಂದು ಗ್ಯಾಂಗ್‌ರೇಪ್ ನಡೆದಿತ್ತು. ವಿಡಿಯೋ ವೈರಲ್ ಆದ ಬಳಿಕ ಮೇ 27 ರಂದು ಎಫ್‍ಐಆರ್ ದಾಖಲಾಗಿತ್ತು.
ಖಾಸಗಿ ಅಂಗಕ್ಕೆ ಬಿಯರ್ ಬಾಟಲ್ ತುರುಕಿದ್ದ ಕಾಮುಕರು ಅತ್ಯಾಚಾರದ ವಿಡಿಯೋವನ್ನು ಹರಿ ಬಿಟ್ಟಿದ್ದರು. ಈ ಶಾಕಿಂಗ್ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.