ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ನಡೆದಿದೆ.
ಮೃತರನ್ನು ಪತಿ ಅವಿನಾಶ್ (38), ಪತ್ನಿ ಮಮತಾ (30), ಮಕ್ಕಳಾದ ಅಧೀರ್ (5) ಹಾಗೂ ಅನಯ (2.5) ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ಬೀದರ್ – ಬಿಜೆಪಿ ಮುಖಂಡ, ಉದ್ಯಮಿ ಸಂಜೀವಕುಮಾರ್ ಸುಗೂರೆ ನಾಪತ್ತೆ
ಗುಲ್ರ‍್ಗ ಮೂಲದ ಅವಿನಾಶ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೊದಲಿಗೆ ಮಕ್ಕಳನ್ನು ಸಾಯಿಸಿ ಬಳಿಕ ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ನರಸಪ್ಪ ಎನ್ನುವವರ ಮನೆಯಲ್ಲಿ ಅವಿನಾಶ್ ಕುಟುಂಬಸ್ಥರು ಬಾಡಿಗೆಗಿದ್ದರು. ಆತ್ಮಹತ್ಯೆ ಮಾಡಿಕೊಂಡ ಅವಿನಾಶ್ ಸಹೋದರ ಉದಯ್ ಎಂಬಾತ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ರಾಜಾನುಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ.ಇದನ್ನೂ ಓದಿ:‘ಕೆರಳಿದ ಸಿಂಹ’ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ