– ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಕ್ಕೆ
ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲ ಪ್ರಕರಣ ಇದಾಗಿದೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳು ಅಟ್ಟಹಾಸ ಮೆರೆದಿದ್ದರು. ಪೊಲೀಸರು ಅವರನ್ನು ಅಟ್ಟಾಡಿಸಿ ಹೊಡೆದಿದ್ರು. ಇಷ್ಟೆಲ್ಲಾ ಆದರೂ ಅವರ ಆಟಾಟೋಪ ನಿಂತಿಲ್ಲ. ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈನ್ನು ಬಿಂದಾಸ್ ಆಗಿ ಮಾಡ್ತಿದ್ದಾರೆ. ಆದರೆ ಇದು ಅದಕ್ಕಿಂತಲೂ ಶಾಕಿಂಗ್ ನ್ಯೂಸ್.
Advertisement
ಹೌದು. ಇಷ್ಟು ದಿನ ಬೇರೆ ರಾಜ್ಯ ಬೇರೆ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಆಗುತ್ತಿರೋ ಬಗ್ಗೆ ಕೇಳಿದ್ರಿ. ಆದರೆ ಈಗ ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲೇ ಡ್ರಗ್ಸ್ ತಯಾರಾಗ್ತಿರೋದನ್ನು ಬೆಂಗಳೂರು ಸಿಸಿಬಿ ಪೊಲೀಸರು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.
Advertisement
Advertisement
ನೈಜೀರಿಯಾ ಪ್ರಜೆ ಜಾನ್ ಎಂಬಾತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿ ಅಕ್ರಮ ಚಟುವಟಿಕೆ ಮಾಡ್ತಿದ್ದ. ಅಕ್ಕಪಕ್ಕದಲ್ಲಿ ಒಳ್ಳೆ ಪರಿಸರ, ಅಲ್ಲೊಂದು ಇಲ್ಲೊಂದು ಮನೆಗಳು ಯಾರಿಗೆ ಯಾರು ಪರಿಚಯವಿಲ್ಲ. ಯಾರೋ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಾ ಇದ್ದಾರೆ. ಆ ಮನೆಯಲ್ಲಿ ಏನೋ ಕೆಮಿಕಲ್ ತಯಾರು ಮಾಡ್ತಿದ್ದಾರೆ ಅಂತಾ ಸ್ಥಳೀಯರು ಸುಮ್ಮನಾಗಿದ್ದರು. ಇಂತಹದ್ದೇ ಜಾಗ ಹುಡುಕಿದ್ದ ಜಾನ್ ಡ್ರಗ್ಸ್ ರೆಡಿ ಮಾಡ್ತಿದ್ದ.
Advertisement
ಕೆಲ ದಿನಗಳ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಡ್ರಗ್ಸ್ ಪೆಡ್ಲರ್ ಒಬ್ಬ ಸಿಕ್ಕಿಬಿದ್ದಿದ್ದ. ಈತನನ್ನು ವಿಚಾರಣೆ ನಡೆಸ್ತಾ ಇರೋವಾಗ ಈ ಜಾನ್ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಮೇರಗೆ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರಕ್ಕೆ ತೆರಳಿದಾಗ ಬಯಲಾಗಿದೆ. ನಿರ್ಜನ ಏರಿಯಾದ ಒಂಟಿ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಪೊಲೀಸರೇ ದಂಗಾಗಿದ್ರು. ಯಾಕಂದ್ರೆ ನೈಜೀರಿಯಾ ಪ್ರಜೆ ಜಾನ್ ಕೆಮಿಕಲ್‍ಗಳನ್ನು ತಂದು ಮನೆಯನ್ನೇ ಲ್ಯಾಬ್ ಮಾಡ್ಕೊಂಡು ಬಹಳ ವ್ಯವಸ್ಥಿತವಾಗಿ ಎಂಡಿಎಂಎ ಮಾತ್ರೆಗಳನ್ನು ತಯಾರು ಮಾಡ್ತಿದ್ದ.
ಶೂನಲ್ಲಿ ಡ್ರಗ್ಸ್ ಇಟ್ಟು ವಿದೇಶಗಳಿಗೆ ಸರಬರಾಜು!
ಜಾನ್ ಮಾತ್ರ ದೊಡ್ಡಮಟ್ಟದಲ್ಲಿ ಡ್ರಗ್ಸ್ ತಯಾರು ಮಾಡಿ ಹೈಫೈ ಕಂಪನಿ ಶೂ ಅಡಿಯಲ್ಲಿಟ್ಟು ದೆಹಲಿ ಮತ್ತು ಬೇರೆ ಬೇರೆ ದೇಶಗಳಿಗೆ ಸರಬರಾಜು ಮಾಡ್ತಿದ್ದ. ದಾಳಿ ವೇಳೆ ಸಿಸಿಬಿ ಪೊಲೀಸರು ಬರೋಬ್ಬರಿ 5 ಕೋಟಿಯಷ್ಟು ಮೌಲ್ಯದ ಡ್ರಗ್ಸ್ ನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ತನ್ನನ್ನು ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ತಂದೆ ಪ್ರತಿಭಟನೆ
2016ರಲ್ಲಿ ಬೆಂಗಳೂರಿಗೆ ಬಂದಿದ್ದ ಜಾನ್ ಕಳೆದ ಒಂದೂವರೆ ತಿಂಗಳ ಹಿಂದೆ ಬೆಟ್ಟದಾಸನಪುರದಲ್ಲಿ ವೃದ್ದ ದಂಪತಿಯೊಬ್ಬರಿಗೆ ಸೇರಿದ ಬಾಡಿಗೆ ಮನೆಯನ್ನು ಪಡೆದಿದ್ದ. ಹೆಚ್ಚಾಗಿ ಹೊರಗಡೆ ಓಡಾಡದ ಜಾನ್, ಅಕ್ಕಪಕ್ಕದವರಿಗೆ ಅನುಮಾನ ಬಾರದ ರೀತಿಯಲ್ಲಿ ರಾತ್ರಿ ಹೊತ್ತಲ್ಲೇ ಡ್ರಗ್ಸ್ ತಯಾರಿ ಕೆಲಸ ಮಾಡ್ತಿದ್ದ. ಒಂದೆರಡು ಬಾರಿ ವೃದ್ಧ ದಂಪತಿ ಮನೆಗೆ ಹೋಗಿದ್ರಾದ್ರು, ಏನೋ ಕೆಮಿಕಲ್ ತಯಾರು ಮಾಡ್ತಿದ್ದಾರೆ ಮಾಡಲಿ ಅಂತಾ ಸುಮ್ಮನಾಗಿದ್ರು. ಪೊಲೀಸರು ದಾಳಿ ಮಾಡಿದಾಗ ವೃದ್ಧ ದಂಪತಿಯೇ ಶಾಕ್ ಆಗಿದ್ದಾರೆ.
ಬೆಂಗಳೂರಿನಲ್ಲೇ ಈ ರೀತಿ ವ್ಯವಸ್ಥಿತವಾಗಿ ವಿದೇಶಿ ಪ್ರಜೆಯೊಬ್ಬ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ತಯಾರು ಮಾಡ್ತಿದ್ದಾನೆ ಅನ್ನೋದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಶಾಕ್ ನೀಡಿದೆ. ಜಾನ್ ಕೇವಲ ಡ್ರಗ್ಸ್ ತಯಾರಕ ಮಾತ್ರ ಆಗಿದ್ದಾನೆ. ಅದನ್ನು ಮಾರಾಟ ಮಾಡ್ತಿದ್ದು ಯಾರು..? ಯಾರಿಂದ ಯಾರಿಗೆ ಹೋಗ್ತಿತ್ತು. ಬೆಂಗಳೂರಿನಲ್ಲಿ ಡೀಲ್ ಮಾಡ್ತಿದ್ದು ಯಾರು ಅನ್ನೋ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!