ವಿಜಯಪುರ: ಹಿರಿ ಜೀವವೊಂದು ತನನ್ನು ಮಗ ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ತಂದೆ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ.
ಕುಪೇಂದ್ರ ಆನೂರು ಎಂಬ ವೃದ್ದ ವೃತ್ತಿಯಲ್ಲಿ ಶಿಕ್ಷಕನಾಗಿರುವ ಮಗ ಭೀಮಶಂಕರ ಎಂಬವರ ಮನೆಯ ಮುಂದೆ 4 ದಿನದಿಂದ ಪ್ರತಿಭಟನೆ ನಡೆಸಿದ್ದಾರೆ. ಪುತ್ರ ಭೀಮಾಶಂಕರ ತನ್ನ ಪೋಷಣೆ ಮಾಡುತ್ತಿಲ್ಲ ಎಂದು ಆರೋಪಿಸಿ ತಂದೆ ಕುಪೇಂದ್ರ ಪ್ರತಿಭಟನೆ ನಡೆಸುತ್ತಿದ್ದು, ಇಂಡಿ ತಾಲೂಕಿನ ಮಿರ್ಗಿ ಗ್ರಾಮದಲ್ಲಿನ ಮನೆಯಲ್ಲಿ ನನ್ನನ್ನು ಬಿಟ್ಟಿದ್ದಾನೆ. ತಾನು ಮಾತ್ರ ಇಂಡಿ ಪಟ್ಟಣದಲ್ಲಿ ವಾಸವಾಗಿದ್ದೇನೆ. ಮಗ ಇಳಿ ವಯಸ್ಸಿನಲ್ಲಿ ನನ್ನನ್ನು ಪೋಷಣೆ ಮಾಡದೇ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ಕುಪೇಂದ್ರ ಅವರು ದೂರುತ್ತಿದ್ದಾರೆ. ಇದನ್ನೂ ಓದಿ: ಆಟೋಗೆ ಕಾರು ಡಿಕ್ಕಿ- ಓರ್ವ ಸಾವು, 6 ಮಂದಿಗೆ ಗಾಯ
ವಯಸ್ಸಾದ ನನ್ನನ್ನು ನೋಡಿ ಕೊಳ್ಳುವ ಕರ್ತವ್ಯ ಮರೆತಿದ್ದಾನೆ ಎಂದು ಮಗನ ವಿರುದ್ಧ ಹರಿಹಾಯುತ್ತಿದ್ದಾರೆ. ಸಾಲ ಸೋಲ ಮಾಡಿ ಮಕ್ಕಳನ್ನು ಬೆಳೆಸಿದ್ದೇನೆ. ಪುತ್ರ ಭೀಮಾಶಂಕರಗೆ 40 ಗ್ರಾಂ ಚಿನ್ನ ಹಾಗೂ 50,000 ರೂಪಾಯಿ ನೀಡಿದ್ದೆ, ಆತನ ಪಾಲಿನ ಜಮೀನು ಸಹ ತೆಗೆದುಕೊಂಡಿದ್ದಾನೆ. ಇದೀಗ ನಾನು ಆತನಿಗೆ ನೀಡಿದ ಚಿನ್ನ ಹಾಗೂ ಹಣವನ್ನು ಮರಳಿ ಕೊಡಿಸಿ ಎಂದು ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದರೂ ದೂರು ತೆಗೆದುಕೊಂಡಿಲ್ಲ. ಇದೀಗ ನ್ಯಾಯಕ್ಕಾಗಿ ಮಗನ ಮನೆಯ ಎದುರಿಗೆ ಪ್ರತಿಭಟನೆ ನಡೆಸುತ್ತಿರುವುದಾಗಿ ನೊಂದ ಕುಪೇಂದ್ರ ಅವರು ಹೇಳುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!