Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Bengaluru City

15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Public TV
Last updated: February 29, 2024 8:26 pm
Public TV
Share
3 Min Read
fotojet 16
SHARE

ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ (Bengaluru Film Festival) ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಚಿತ್ರೋತ್ಸವದ ರಾಯಭಾರಿ ನಟ ಡಾಲಿ, ಕಾಟೇರ ನಟಿ ಆರಾಧನಾ, ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್, ಪೂಜಾ ಗಾಂಧಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಸಿನಿಮೋತ್ಸವಕ್ಕೆ ಡಾಲಿ ಧನಂಜಯ್ ರಾಯಭಾರಿ

film festival

ಫೆ.29ರಿಂದ ಮಾರ್ಚ್ 7ರ ವರೆಗೆ ಸುಮಾರು ಎಂಟು ದಿನಗಳ ಕಾಲ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ಇದರಲ್ಲಿ 50 ರಾಷ್ಟ್ರಗಳ ಸುಮಾರು 180 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದನ್ನೂ ಓದಿ:ಪ್ರೆಗ್ನೆನ್ಸಿ ಖಚಿತ ಪಡಿಸಿದ ನಟಿ ದೀಪಿಕಾ ಪಡುಕೋಣೆ

film festival 1

ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಏಷ್ಯನ್ ಸಿನಿಮಾ ಸ್ಪರ್ಧೆಗೆ ಅಂತಾರಾಷ್ಟ್ರೀಯ ತೀರ್ಪುಗಾರರು, ಭಾರತೀಯ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಕನ್ನಡ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಸೇರಿದಂತೆ ಚಿತ್ರೋತ್ಸವದಲ್ಲಿ ಐದು ತೀರ್ಪುಗಾರ ತಂಡಗಳಿರುತ್ತವೆ. ವಿದೇಶದಿಂದ ದೃಢಪಡಿಸಿದ ಅಂತಾರಾರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ರಷ್ಯಾದಿಂದ ನೀನಾ ಕೊಚೆಲೆವಾ, ಸ್ಪೇನ್‌ನ ರೊಸಾನ್ನಾ ಜಿ ಅಲೋನ್ಸೆ, ಬಾಂಗ್ಲಾದೇಶದ ಆರಿ ಹಕ್ ಬಾಂಧೋನ್, ಯುಕೆಯಿಂದ ಕ್ಯಾರಿ ರಾಜಿಂದರ್ ಸಾಹಿ, ಫ್ಲೋವಾಕಿಯಾದ ವೈರಾ ಲಾಂಗರೋವಾ, ತೈವಾನ್‌ನಿಂದ ಹ್ಯಾನ್ ಟಿಯೆನ್, ಆಸ್ಟ್ರೇಲಿಯಾದಿಂದ ಮ್ಯಾಕ್ಸಿ ವಿಲಿಯಮ್ಮನ್ ಮತ್ತು ಬಿಲ್ಲೇರಿಯಾದ ಆಂಡೋನಿಕಾ ಮಾರ್ಟೂನೊವಾ ಸೇರಿದ್ದಾರೆ. ರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ಒರಿಸ್ಸಾದಿಂದ ವಿಜಯಾ ಜೆನಾ, ಮಣಿಪುರದಿಂದ ಮೇಘಚಂದ್ರ ಕೊಂಗ್ರಾಮ್, ಕೊಲ್ನೋತಾದಿಂದ ಶೇಖರ್ ದಾಸ್, ಮಹಾರಾಷ್ಟ್ರದಿಂದ ಸಂಜಯ್ ಕೃಷ್ಣಾಜಿ ಪಾಟೀಲ್, ಅಸ್ಸಾಂನಿಂದ ಜಾದುಮೋನಿ ದತ್ತಾ ಸೇರಿದ್ದಾರೆ. ಇವರೆಲ್ಲ ಹೆಸರಾಂತ ನಿರ್ದೇಶಕರು ಇಲ್ಲವೇ ವಿಮರ್ಶಕರು. ಸ್ಥಳೀಯ ಚಿತ್ರನಿರ್ದೇಶಕರು, ವಿಮರ್ಶಕರು, ಪತ್ರಕರ್ತರು ಕೆಲವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ತೀರ್ಪುಗಾರ ತಂಡದ ಭಾಗವಾಗಿರುತ್ತಾರೆ.

film festival 1 1

ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ದಿಷ್ಟ ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ. ಅದ್ಭುತ ಬಾರತ ನಮ್ಮ ಉತ್ಸವದ ಅನನ್ಯ ವಿಭಾಗ. ಇದರಲ್ಲಿ ಭಾರತದ ಕಡಿಮೆ ತಿಳಿದಿರುವ ಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ಈ ಆವೃತ್ತಿಯಲ್ಲಿ ತುಳು, ಕೊಡವ, ಬಂಜಾರ, ಅರೆಬಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ, ಭಾಷೆಗಳ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪುನರವಲೋಕನ ವಿಭಾಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಮತ್ತು ಇರಾನಿನ ಚಲನಚಿತ್ರ ನಿರ್ಮಾಪಕ ಅಬ್ಬಾಸ್ ಕೈರೋಸ್ಟೋಮಿ ಅವರನ್ನು ಆಯ್ಕೆ ಮಾಡಿದ್ದು, ಅವರ ಆಯ್ದ ಚಿತ್ರಗಳು ಈ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ.

film festival 2

ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಂಗೀತ ಸಂಯೋಜಕ ವಿಜಯಭಾಸ್ಕರ್ ಶತಮಾನೋತ್ಸವ ಸ್ಮರಣೆಯಾಗಿ ಅವರ ಒಂದೆರಡು ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು. ಅವರು ಸಿನಿಮಾ ಸಂಗೀತಕ್ಕೆ ನೀಡಿದ ಕೊಡುಗೆಯ ಕುರಿತು ವಿಶೇಷ ಪ್ರಸ್ತುತಿ ಇರುತ್ತದೆ. ಛಾಯಾಗ್ರಾಹಕ ಎನ್ ಜಿ ರಾವ್ ಅವರ ಚಿತ್ರವೊಂದನ್ನು ಪ್ರದರ್ಶಿಸುವ ಮೂಲಕ ಅವರಿಗೆ ಶತಮಾನೋತ್ಸವದ ಗೌರವವನ್ನು ಸಲ್ಲಿಸಲಾಗುವುದು. ಕಳೆದವರ್ಷ ನಮ್ಮನ್ನು ಅಗಲಿದ ಹೆಸರಾಂತ ತಾರೆ, ನಿರ್ಮಾಪಕಿ ಲೀಲಾವತಿ, ನಿರ್ದೇಶಕರಾದ ಭಗವಾನ್, ಸಿ.ವಿ. ಶಿವಶಂಕರ್ ಮತ್ತು ಗಾಯಕಿ ವಾಣಿ ಜಯರಾಂ ಗೌರವಾರ್ಥ ಅವರ ಚಲನಚಿತ್ರ ಪ್ರದರ್ಶನ ಇದೆ. 15 ಗಂಟೆಗಳ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ವಿಭಾಗವು ಮಾನವ ಘನತೆ ಸಾಮಾಜಿಕ ನ್ಯಾಯ, ಪರಿಸರ ಕಾಳಜಿಗಳು ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಕಾಳಜಿಯ ಚಲನಚಿತ್ರಗಳ ಮೇಲೆ ವಿಶೇಷ ಗಮನವನ್ನು ಹೊಂದಿದೆ.

ಸಂಕಲನ, ಛಾಯಾಗ್ರಹಣ, ಕಲೆ ಮತ್ತು ನಿರ್ಮಾಣ ವಿನ್ಯಾಸ, ಸಂಗೀತ, ಭಾರತೀಯ ಸಿನಿಮಾದಲ್ಲಿ ಸಾಂವಿಧಾನಿಕ ಮೌಲ್ಯಗಳು, ಚಲನಚಿತ್ರ ವಿಮರ್ಶೆ, ಚಲನಚಿತ್ರ ಸಹ ನಿರ್ಮಾಣ ಮತ್ತು ಮಾರುಕಟ್ಟೆ ಸಾಧ್ಯತೆಗಳು, ಲಿಂಗ ಸಂವೇದನೆ, ಚಲನಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವದ ಕುರಿತು ಮಾತುಕತೆಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು, ತಜ್ಞರಿಂದ ಉಪನ್ಯಾಸ, ಸಂವಾದ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಒಳಗೊಂಡಿವೆ. ಬೇರೆ ದೇಶಗಳ ತೀರ್ಪುಗಾರರು, ವಿದೇಶದಿಂದ ಮತ್ತು ಭಾರತದ ಇತರ ಭಾಗಗಳ ಚಲನಚಿತ್ರ ತಯಾರಕರು, ವಿಮರ್ಶಕರು/ಪತ್ರಕರ್ತರು, ಚಲನಚಿತ್ರೋತ್ಸವ ಪ್ರತಿನಿಧಿಗಳು, ಪ್ರೋಗ್ರಾಮರ್‌ಗಳು, ಸಲಹೆಗಾರರು ಮೊದಲಾದವರು ಅತಿಥಿಗಳಾಗಿ ಬರಲಿದ್ದಾರೆ. ವಿದೇಶದಿಂದ ಸುಮಾರು 20 ಮಂದಿ ಸೇರಿದಂತೆ ಸುಮಾರು 70 ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾನ್, ಉಜೇಕಿಸ್ತಾನ್, ಜೆಕ್ ರಿಪಬ್ಲಿಕ್, ಯುಕೆ, ಬಲ್ಲೇರಿಯಾ, ತೈವಾನ್, ಸ್ಪೇನ್, ಜರ್ಮನಿ ಮತ್ತು ರಷ್ಯಾವನ್ನು ಪ್ರತಿನಿಧಿಗಳು, ಸ್ಥಳೀಯ ಚಲನಚಿತ್ರ ಮತ್ತು ಸಾಂಸ್ಕೃತಿಕ ಮಂದಿ, ಬೆಂಗಳೂರಿನಲ್ಲಿರುವ ವಿದೇಶಿ ಸಂಸ್ಥೆಗಳ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನದೊಂದಿಗೆ ಸಮಾರೋಪ ಸಮಾರಂಭವು, ಮಾರ್ಚ್ 7, 2024, ಗುರುವಾರದಂದು ವಿಧಾನಸೌಧದ ಬ್ಯಾಂಕೈಟ್ ಹಾಲ್‌ನಲ್ಲಿ ನಡೆಯಲಿದೆ.

TAGGED:Film Festivalsandalwoodಆರಾಧನಾಡಾಲಿಪೂಜಾ ಗಾಂಧಿಬೆಂಗಳೂರು ಚಿತ್ರೋತ್ಸವಶಿವರಾಜ್‍ಕುಮಾರ್ಸಿಎಂ ಸಿದ್ದರಾಮಯ್ಯ
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

IPL MI LSG
Cricket

ಲಕ್ನೋ ವಿರುದ್ಧ ಮುಂಬೈಗೆ 6 ವಿಕೆಟ್‌ಗಳ ಜಯ

Public TV
ByPublic TV
1 hour ago
Vijay 2
Latest

8 ಗ್ರಾಂ ಚಿನ್ನ, 6 ಸಿಲಿಂಡರ್‌ ಉಚಿತ, ಪದವೀಧರರಿಗೆ 4,000 ಭತ್ಯೆ – ʻವಿಜಯʼ ಭರವಸೆಯತ್ತ ಜನರ ಚಿತ್ತ!

Public TV
ByPublic TV
2 hours ago
Himanta Sarmas BJP To Win 70 80 Of Assams 126 Seats NDA Sweep Exit Poll
Latest

WE ARE BACK, back with a BANG! – ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಜಯ – 3ನೇ ಅವಧಿಗೂ ಶರ್ಮಾ ಸಿಎಂ ಆಗೋದು ಫಿಕ್ಸ್‌

Public TV
ByPublic TV
2 hours ago
SUVENDU ADHIKARI
Latest

ಬಂಗಾಳದಲ್ಲಿ ಬಿಜೆಪಿ ಗೆಲುವು, ಟಿಎಂಸಿ ಸೋಲಿಗೆ ಕಾರಣಗಳೇನು?

Public TV
ByPublic TV
2 hours ago
Modi 3
Latest

Assembly Elections Results 2026 | ಪುದುಚೇರಿಯಲ್ಲಿ ಎನ್‌ಡಿಎಗೆ ಮತ್ತೆ ಅಧಿಕಾರ

Public TV
ByPublic TV
2 hours ago
Mamata Banerjee West Bengal Suvendu Adhikari
Latest

ಮಮತಾಗೆ 15,000ಕ್ಕೂ ಹೆಚ್ಚು ಮತಗಳಿಂದ ಹೀನಾಯ ಸೋಲು – ಸುವೆಂದು ಅಧಿಕಾರಿಗೆ ಜಯ

Public TV
ByPublic TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?