ಬೆಂಗಳೂರು: ನಿರ್ವಹಣೆ ಕಾರಣದಿಂದ ಕಳೆದ ಕೆಲ ದಿನಗಳಿಂದ ನಗರದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈ ಓವರ್ ಮೇಲೆ ಬಸ್ ಹಾಗೂ ಬೃಹತ್ ವಾಹನಗಳ ಓಡಾಟಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಮುಕ್ತಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ ನಿರ್ಮಾಣವಾಗಿ 8 ವರ್ಷ ಪೂರ್ಣಗೊಳಿಸಿದ ಕಾರಣದಿಂದ ನಿರ್ವಹಣೆ ದೃಷ್ಟಿಯಿಂದ ನಿಷೇಧ ವಿಧಿಸಲಾಗಿತ್ತು. ಇಂದು ಟೋಲ್ ನಲ್ಲಿ ಅಧಿಕಾರಿಗಳೊಂದಿಗೆ ಪೂಜೆ ನೆರವೇರಿಸಿದ ಸಿಬ್ಬಂದಿ ಸಂಚಾರಕ್ಕೆ ಚಾಲನೆ ನೀಡಿದರು. ನಿರ್ವಹಣೆಯ ಅವಧಿಯಲ್ಲಿ ಫ್ಲೈ ಓವರ್ ಮೇಲಿನ 16 ಸಂಪರ್ಕ ಜಾಯಿಂಟ್ ಗಳ ಪುನರ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಪಿಲ್ಲರ್ ಗಳ ನಿರ್ವಹಣೆಯನ್ನು ಪೂರ್ಣಗೊಳಿಸಲಾಗಿದೆ.
ಎಂಟು ವರ್ಷಕ್ಕೊಮ್ಮೆ ನಡೆಯುವ ನಿರ್ವಹಣಾ ಕಾರ್ಯದ ಪರಿಣಾಮ ಕಳೆದ 51 ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಗಿದ್ದರು. ಹೊಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವಾಗಲೇ ಫ್ಲೈ ಓವರ್ ಕೂಡ ಬಂದ್ ಆಗಿದ್ದು ವಾಹನ ಸವಾರರಿಗೆ ತೀವ್ರ ಅಡಚಣೆಗೆ ಕಾರಣವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv