ಬೆಂಗಳೂರು: ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ಸೀಜ್ ಮಾಡಿದ್ದ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿಯನ್ನೇ ಅಮಾನತು ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿ ವಾಸು ಅವರನ್ನು ಅಡಿಷನಲ್ ಕಮಿಷನರ್ ಮುರುಗನ್ ಅಮಾನತುಗೊಳಿಸಿದ್ದಾರೆ. ತನ್ನ ಮಾತಿಗೆ ಬೆಲೆ ಕೊಟ್ಟಿಲ್ಲವೆಂದು ನನ್ನನ್ನು ಅಡಿಷನಲ್ ಕಮಿಷನರ್ ಮುರುಗನ್ ಸಸ್ಪೆಂಡ್ ಮಾಡಿದ್ದಾರೆ ಎಂದು ಎಸಿಪಿ ವಾಸು ಆರೋಪಿಸಿದ್ದಾರೆ.
Advertisement
ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಕೊರೊನಾ ಸೋಂಕಿನಿಂದ ಜನರನ್ನು ಪಾರು ಮಾಡುವಲ್ಲಿ ವೈದ್ಯರು, ಪೊಲೀಸರು ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಕ್ಕೆ ಅವರಿಗೆ ಸಿಕ್ಕ ಬಹುಮಾನ ಅಮಾನತು ಎಂಬ ಆರೋಪ ಕೇಳಿ ಬಂದಿದೆ.
Advertisement
ಏಪ್ರಿಲ್ 11ರಂದು ಜಾಗೃತಿ ದಳದ ವಾಹನದಲ್ಲಿದ್ದ 100ಕ್ಕೂ ಹೆಚ್ಚು ದುಬಾರಿ ಬೆಲೆಯ ಮದ್ಯ ಬಾಟಲಿಗಳನ್ನು ಬೆಟ್ಟದದಾಸನಪುರದ ಬಳಿ ಸೀಜ್ ಮಾಡಲಾಗಿತ್ತು. ಆ ಮದ್ಯವನ್ನು ಚಾಲಕ ಗೋಪಿ ಎಂಬವರು ಅಡಿಷನಲ್ ಕಮಿಷನರ್ ಮುರುಗನ್ ಅವರಿಗೇ ಸರಬರಾಜು ಮಾಡುತ್ತಿದ್ದರಂತೆ. ಚಾಲಕ ಗೋಪಿ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರು. ಮುರುಗನ್ ಅವರು ಜಾಮೀನು ಕೊಟ್ಟು ಬಿಡುಗೊಡೆಗೊಳಿಸಿದ್ದಾರೆ. ನಂತರ ಕೇಸನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ ನನಗೆ ಸಸ್ಪೆಂಡ್ ಶಿಕ್ಷೆ ಅಂತ ಎಸಿಪಿ ವಾಸು ಆರೋಪಿಸಿದ್ದಾರೆ.