ಬೆಂಗಳೂರು: ತಿಗಳರಪಾಳ್ಯದಲ್ಲಿ ನಡೆದಿರುವ ಐವರು ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಡೀ ಕುಟುಂಬ ಸರ್ವನಾಶಕ್ಕೆ ಮನೆಯಲ್ಲಿ ಆಗಿದ್ದಾದ್ರು ಏನು..?, ಶಂಕರ್ ಮನೆಯಲ್ಲಿ ಕಳೆದ ಭಾನುವಾರ ಐವರ ಮಧ್ಯೆ ಆಗಿದ್ದೇನು…?, 3 ಕೋಟಿ ಮನೆ, ಲಕ್ಷಾಂತರ ರೂ. ದುಡ್ಡಿದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಇದೀಗ ಸಾವಿನ ಕೊನೆ ಕ್ಷಣಗಳ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಭಾನುವಾರ ನಡೆದಿದ್ದೇನು..?
ಶಂಕರ್ ಮನೆಯಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಿತ್ಯ ಗಲಾಟೆಗಳು ನಡೆಯುತ್ತಿದ್ದವು. ಶಂಕರ್-ಹೆಂಡತಿ, ಮೂವರು ಮಕ್ಕಳ ಮಧ್ಯೆ ನಿತ್ಯ ಕಲಹಗಳಾಗುತ್ತಿದ್ದವು. ಪತ್ನಿ, ಮಕ್ಕಳ ನಡುವಳಿಕೆ ಬಗ್ಗೆ ಶಂಕರ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. 10 ಲಕ್ಷ ಚೀಟಿ ಹಣ ನೀಡುವಂತೆ ಮಗ ಮಧುಸಾಗರ್‍ಗೆ ಶಂಕರ್ ಕೇಳಿದ್ದರು. ಹಣದ ವಿಚಾರವಾಗಿ ಅಪ್ಪ-ಮಗನ ಮಧ್ಯೆ ದೊಡ್ಡದಾಗಿ ವಾಗ್ವಾದ ನಡೆದಿತ್ತು. ಇದನ್ನೂ ಓದಿ: ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್
ಹಣ ಕೊಡುವುದಾಗಿ ಕರೆಸಿಕೊಂಡು ಮತ್ತೆ ಮಗ ತಗಾದೆ ತೆಗೆದಿದ್ದ. ಸಾಮೂಹಿಕ ಆತ್ಮಹತ್ಯೆಗೆ ಮುನ್ನ ಮನೆಯಲ್ಲಿ ರಣರಂಗವೇ ನಡೆದು ಹೋಗಿತ್ತು. ತಂದೆ- ಮಗನ ನಡುವೆ ಆರಂಭದ ಜಗಳ ಇಡೀ ಮನೆಗೆ ಅಂಟಿಕೊಂಡಿತ್ತು. ಕೊನೆಗೆ ಶಂಕರ್ ಒಬ್ಬರನ್ನ ಒಂದು ಕಡೆ ಮಾಡಿ ಎಲ್ಲರೂ ಶಂಕರ್ ಮೇಲೆ ಮುಗಿಬಿದ್ದಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಶಂಕರ್ ‘ಹಾಳಾಗ್ ಹೋಗ್ರಿ’ ಎಂದು ಮನೆಯಲ್ಲಿದ್ದ ಬಟ್ಟೆಗಳನ್ನ ತುಂಬಿಕೊಂಡು ಶಂಕರ್ ಮನೆಯಿಂದ ಹೊರ ಬಂದಿದ್ದರು. ಇದನ್ನೂ ಓದಿ: ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್, ಕುಡುಕ – ಡೆತ್‍ನೋಟ್‍ನಲ್ಲಿ ಮಧುಸಾಗರ್ ಗಂಭೀರ ಆರೋಪ
ಬಟ್ಟೆ ಬರೆಯೊಂದಿಗೆ ಶಂಕರ್ ಮೈಸೂರು ಕಡೆ ಹೊರಟು ಹೋಗಿದ್ದರು. ಶಂಕರ್ ಮನೆ ಬಿಟ್ಟು ಹೋಗಿ ಮೂರ್ನಾಲ್ಕು ದಿನದಲ್ಲಿ ಇಡೀ ಮನೆ ಮಂದಿಯೆಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನಡೆದ ವೇಳೆ ಶಂಕರ್ ಹೇಳಿದು ಅದೊಂದು ಮಾತು ಎಲ್ಲರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತಾ? ‘ಹಾಳಾಗಿ ಹೋಗಿ ನೀವೆಲ್ಲಾ’ ಎಂದು ಶಾಪ ಹಾಕಿದ್ದರಿಂದ ರೋಸಿ ಹೋಗಿ ಆತ್ಮಹತ್ಯೆ ಅಂತ ನಿರ್ಧಾರ ಮಾಡಿಕೊಂಟ್ರಾ ಅನ್ನೋದು ಸದ್ಯ ದೊಡ್ಡ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಶಂಕರ್, ಇಬ್ಬರು ಅಳಿಯಂದಿರ ವಿರುದ್ಧ ದೂರು ದಾಖಲು