ಬೆಂಗಳೂರು: ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಡ್ರೈವರ್ ನನ್ನು ಓಲಾ ಕಂಪನಿ ಅಮಾನತು ಮಾಡಿದೆ.
ರಾಜಶೇಖರ್ ರೆಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಡ್ರೈವರ್. ಭಾನುವಾರ ರಾತ್ರಿ ಕೋರಮಂಗಲ ರಿಂಗ್ ರಸ್ತೆಯಲ್ಲಿ ಈ ಘಟನೆ ರಾಜಶೇಖರ್ ರೆಡ್ಡಿ ಅಸಭ್ಯವಾಗಿ ವರ್ತಿಸಿದ್ದ.
Advertisement
ಇಂದಿರಾನಗರದಿಂದ ಬಿಟಿಎಂ ಲೇಔಟ್ ತೆರಳುತ್ತಿದ್ದಾಗ ರಾಜಶೇಖರ್ ರೆಡ್ಡಿ ಕಾರನ್ನು ಚೈಲ್ಡ್ ಲಾಕ್ ಮಾಡಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಕುರಿತು ಓಲಾ ಸಂಸ್ಥೆಗೆ ಯುವತಿ ದೂರು ನೀಡಿದ್ದರು. ಆದರೆ ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು.
Advertisement
ಈ ವಿಚಾರ ಬೆಳಕಿಗೆ ಬಂದ ಬಳಿಕ ಓಲಾ ಕಂಪೆನಿ ಡ್ರೈವರ್ ನನ್ನು ಅಮಾನತು ಗೊಳಿಸಿದ್ದು, ರಾಜಶೇಖರ್ ರೆಡ್ಡಿ ಮೇಲೆ ದೂರು ನೀಡುವಂತೆ ಯುವತಿ ಜೊತೆ ಕೇಳಿಕೊಂಡಿದೆ. ( ಇದನ್ನೂ ಓದಿ: ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ! )
Advertisement
ನಡೆದಿದ್ದು ಏನು? 23 ವರ್ಷದ ಯುವತಿ ಭಾನುವಾರ ರಾತ್ರಿ ಇಂದಿರಾನಗರದಿಂದ ಬಿಟಿಎಂ ಲೇಔಟ್ ತೆರಳಲು ಓಲಾ ಕಾರ್ ಬುಕ್ ಮಾಡಿದ್ದರು. ಈ ವೇಳೆ ಕೋರ ಮಂಗಲದ ರಿಂಗ್ ರಸ್ತೆಯಲ್ಲಿ ಕಾರು ನಿಲ್ಲಿಸಿದ ಡ್ರೈವರ್ ಚೈಲ್ಡ್ ಲಾಕ್ ಮಾಡಿ ಯುವತಿಯ ದೇಹವನ್ನು ಮುಟ್ಟಲು ಪ್ರಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದ.
Advertisement
ಈ ವೇಳೆ ಕಾರ್ ನಿಂದ ಹೊರ ಬರಲು ಪ್ರಯತ್ನಿಸಿದ ಯುವತಿ ಕಾರ್ ಲಾಕ್ ಆಗಿದುವುದನ್ನು ಕಂಡು ಕಾರಿನ ಕಿಟಕಿ ಗಾಜಿನ ಮೇಲೆ ಬಲವಾಗಿ ಹೊಡೆದು ಕಿರುಚಿಕೊಳ್ಳುತ್ತಾರೆ. ಇದರಿಂದ ಭಯಗೊಂಡ ಡ್ರೈವರ್ ಯುವತಿಯನ್ನು ಕಾರಿನಿಂದ ಹೊರ ಬಿಡುತ್ತಾನೆ. ಅಲ್ಲಿಂದ ಸುಮಾರು 500 ಮೀಟರ್ ದೂರವಿರುವ ಈಜಿಪುರ ಟ್ರಾಫಿಕ್ ಸಿಗ್ನಲ್ ಬಳಿ ಓಡಿ ಬಂದ ಯುವತಿ ಅಲ್ಲಿಂದ ಬೇರೆ ವಾಹನದಲ್ಲಿ ಮನೆಗೆ ತೆರಳುತ್ತಾರೆ. ಘಟನೆ ನಡೆದ ಮರುದಿನವೂ ಡ್ರೈವರ್ ಫೋನ್ ಮಾಡಿ ಆಕೆಯ ಜೊತೆ ಮಾತನಾಡಿದ್ದಾನೆ. ನಂತರ ಘಟನೆ ಕುರಿತು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.