ಬೆಂಗಳೂರು: ಕೊರೊನಾ ಭಯದಿಂದ ಇಡೀ ಬೆಂಗಳೂರು ಆತಂಕಕ್ಕೀಡಾಗಿದೆ. ಆದರೆ ಪೊಲೀಸರು ಪ್ರತಿದಿನ ವಾಹನ ಸವಾರರಿಗೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಬೇಕು, ನಿಲ್ಲಿಸುವಂತಿಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ.
ಕೊರೊನಾ ವೈರಸ್‍ಗೆ ಬೆದರಿರುವ ಪೊಲೀಸರು ಪ್ರತಿದಿನ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಾಗ ಸೋಂಕಿತ ವಾಹನ ಸವಾರರ ಉಸಿರು ನಮಗೆ ತಗುಲಿ ನಮಗೂ ಸಂಕಷ್ಟ ಎದುರಾಗುತ್ತೆ ಅಂತ ಗೋಳಿಡುತ್ತರುವಾಗಲೇ ಪೊಲೀಸ್ ಆಯುಕ್ತರು ಈ ಹೇಳಿಕೆ ನೀಡಿದ್ದಾರೆ.
Advertisement
Advertisement
ಯಾವುದೇ ಕಾರಣಕ್ಕೂ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡೋದನ್ನು ನಿಲ್ಲಿಸೋದಕ್ಕೆ ಸಾಧ್ಯವಿಲ್ಲ. ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ಮಾಡದೇ ಇರೋದು ಅತ್ಯಂತ ದೊಡ್ಡ ಅಪರಾಧ ಆಗುತ್ತೆ. ಅದಕ್ಕಾಗಿ ನಾವು ಡ್ರಿಂಕ್ ಅಂಡ್ ಡ್ರೈವ್ ನಿರಂತರವಾಗಿ ಚೆಕ್ ಮಾಡಿಸ್ತೀವಿ. ಈಗಾಗಲೇ ಇದರ ಬಗ್ಗೆ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರಿಂದ ಮಾಹಿತಿಯನ್ನು ಕೇಳಿದ್ದೀವಿ. ಅವರು ಕೂಡ ಯಾವುದೇ ಭಯಪಡುವ ಅಗತ್ಯ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ಕಿಂಗ್ ಮುಂದುವರೆಸಿದ್ದೇವೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.