– ಕ್ಲೀನ್ ಮಾಡದಿದ್ರೇ ಬೀಳುತ್ತೆ ಫೈನ್
ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಡಾಗ್ಸ್ ಪ್ರಿಯರು. ಸಾಕು ನಾಯಿಗಳಿಗೆ ಸ್ವಂತ ಮಕ್ಕಳ ತರಾನೇ ಆಟ, ಊಟ ಹಾಕುತ್ತಾರೆ. ಜೊತೆಗೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ಗೆ ವಾಕಿಂಗ್ ಕರೆದುಕೊಂಡು ಬರುತ್ತಾರೆ.
ಹೀಗೆ ವಾಕಿಂಗ್‍ಗೆ ಬರೋ ನಾಯಿಗಳು, ಬೀದಿನಾಯಿಗಳ ಜೊತೆ ಸೇರಿಕೊಂಡು ಕಬ್ಬನ್ ಪಾರ್ಕಲ್ಲಿ ಹಾವಳಿಯನ್ನುಂಟು ಮಾಡಿವೆ. ಇದು ಕಬ್ಬನ್ ಪಾರ್ಕ್‍ನ ವಾಯುವಿಹಾರಿಗಳ ಕಿರಿಕಿರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಈ ನಾಯಿಗಳು ಮಾಡುವ ಗಲೀಜು ವಾಯುವಿಹಾರಿಗಳಿಗೆ ಬೇಸರ ಮೂಡಿಸಿದ್ದು, ಇದನ್ನ ತುಳಿದುಕೊಂಡೆ ಹೇಗೆ ಓಡಾಡುವುದು ಎಂದು ತೋಟಗಾರಿಕೆ ಇಲಾಖೆ ಮೊರೆ ಹೋಗಿದ್ದಾರೆ.
Advertisement
Advertisement
ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ನಲ್ಲಿ ಇನ್ಮುಂದೆ ಡಾಗ್ ವಾಕಿಂಗ್ ಕರೆದುಕೊಂಡು ಬರುವ ನಾಯಿಗಳ ಮಾಲೀಕರೆ ನಾಯಿಗಳು ಮಾಡುವ ಗಲೀಜು ಕ್ಲೀನ್ ಮಾಡಬೇಕು ಎಂದು ಸೂಚಿಸಿದೆ. ಜೊತೆಗೆ ಡಾಗ್ ಜೊತೆ ವಾಕಿಂಗ್ ಬರುವ ಮಾಲೀಕರಿಗೆ ಒಂದು ಬಾಸ್ಕೆಟ್ ಅಥವಾ ಬ್ಯಾಗ್ ಕಡ್ಡಾಯ ತರುವಂತೆ ಆದೇಶಿಸಲು ಚಿಂತನೆ ನಡೆಸಿದೆ. ಜೊತೆಗೆ ಕ್ಲೀನ್ ಮಾಡದಿದ್ದರೆ ಫೈನ್ ಹಾಕಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
Advertisement
Advertisement
ನಾಯಿಗಳ ಜೊತೆ ವಾಕಿಂಗ್ ಬಂದರೆ ಅದರ ಗಲೀಜು ಕ್ಲೀನ್ ಮಾಡಿ ಅಂದ್ರೆ ಹೇಗೆ? ಡಾಗ್ ಜೊತೆ ಪಾರ್ಕ್ ಗೆ ಬರುವಾಗ ಬಾಸ್ಕೆಟ್ ಬ್ಯಾಗ್ ತರಲು ಕಷ್ಟ ಆಗುತ್ತೆ ಎಂದು ನಾಯಿ ಮಾಲೀಕರು, ತೋಟಗಾರಿಕೆ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಕಬ್ಬನ್ ಪಾರ್ಕ್ ನಲ್ಲಿ ಡಾಗಿ ಜೊತೆ ಔಟಿಂಗ್ ಹೋಗೋ ಮುನ್ನ ಹುಷಾರಾಗಿ. ತೋಟಗಾರಿಕೆ ಇಲಾಖೆಯ ಈ ರೂಲ್ಸ್ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತೆ ಎಂದು ಕಾದು ನೋಡಬೇಕಿದೆ.