ಬೆಂಗಳೂರು: ರೆಡ್ ಝೋನ್‍ನಲ್ಲಿರೋ ಬೆಂಗಳೂರಿನಲ್ಲಿ 86 ಜನ ಸೋಂಕಿತರಿದ್ದಾರೆ. ಈ ಪೈಕಿ ಬೆಂಗಳೂರು ದಕ್ಷಿಣ 18, ಪೂರ್ವ 16, ಮಹದೇವಪುರ 10, ಬೊಮ್ಮನಹಳ್ಳಿ 4, ಆರ್ ಆರ್. ನಗರ 3 ಮತ್ತು ಯಲಹಂಕ 2 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಪಶ್ಚಿಮ ವಿಭಾಗದಲ್ಲಿ ಬರೋಬ್ಬರಿ 22 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಶ್ಚಿಮ ವಿಭಾಗದ 10 ಕಿಲೋ ಮೀಟರ್ ಸುತ್ತಮುತ್ತಲೇ ಕೊರೊನಾ ಡೇಂಜರ್ ಹಾಟ್‍ಸ್ಪಾಟ್ ಆಗಿದೆ. ಟಿಪ್ಪುನಗರದ ಮೃತ ವೃದ್ಧನಿಂದ ಮೊಮ್ಮಗನಿಗೂ ಸೋಂಕು ತಗುಲಿದೆ. ಮೃತ ಕುಟುಂಬದಲ್ಲಿರುವ 23 ಮಂದಿಯಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಇನ್ನಿತರ ಕುಟುಂಬಸ್ಥರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.
Advertisement
Advertisement
ಬೆಂಗಳೂರು ಪಶ್ಚಿಮ ವಿಭಾಗ ಡೇಂಜರ್:
ಪಶ್ಚಿಮ ವಿಭಾಗ – 22 ಜನರಿಗೆ ಕೊರೊನಾ ತಗುಲಿದೆ.
ಪಾದರಾಯನಪುರ – 9 ಮಂದಿಗೆ ಕೊರಿನಾ ತಗುಲಿದೆ. (ರೋಗಿ-198 ಮನೆಯ ಸುತ್ತಮುತ್ತ ಬಾಡಿಗೆಗೆ ಇದ್ದವರು. 50 ಜನ ಹೋಟೆಲ್ ಕ್ವಾರಂಟೈನ್, 100 ಜನ ಸೆಕೆಂಡರಿ ಕಾಂಟ್ಯಾಕ್ಟ್‍ಗಳಿಗೆ ಗೃಹ ಬಂಧನ ವಿಧಿಸಲಾಗಿದೆ).
ಟಿಪ್ಪು ನಗರ – 3 ಕೊರೊನಾ ಸೋಂಕಿತರು. (ಮೃತ ವೃದ್ಧ ಮೊಮ್ಮಗ ಮತ್ತು ವೃದ್ಧನ ಮನೆಗೆ ಬಂದಿದ್ದ ಯುವತಿ ಸೇರಿ)
ಬಾಪೂಜಿನಗರ – 2 ಕೊರೊನಾ ಸೋಂಕಿತರು.
ದೊಡ್ಡಬಸ್ತಿ – ಓರ್ವರಿಗೆ ಸೋಂಕು ತಗುಲಿದೆ.
Advertisement
Advertisement
ರಾಜ್ಯದಲ್ಲಿ ಕೊರೊನಾ ಸದ್ದಿಲ್ಲದೇ ತನ್ನ ಕಬಂಧಬಾಹು ಚಾಚುತ್ತಲೇ ಇದೆ. ಬೆಂಗಳೂರಿನ ಟಿಪ್ಪು ನಗರ ಮೂಲದ ವೃದ್ಧ ಕೊರೊನಾ ಡೆತ್ ಪ್ರಕರಣ ಮತ್ತೊಂದು ತಲೆ ನೋವಾಗಿದೆ. ಈ ವೃದ್ಧಗೆ ಚಿಕಿತ್ಸೆ ನೀಡಿದ್ದ ಜಯದೇವ ಆಸ್ಪತ್ರೆಯ 10 ಸಿಬ್ಬಂದಿಗೆ ಈಗ 10 ದಿನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜಯದೇವ ಆಸ್ಪತ್ರೆಯ ರೆಗ್ಯೂಲರ್ ಪೇಷೆಂಟ್ ಆಗಿದ್ದ ಈ ವೃದ್ಧ, ಮೊನ್ನೆ ಹೃದಯ ಸಮಸ್ಯೆ, ಕಫಾ, ಕೆಮ್ಮು ಅಂತ ಚೆಕಪ್‍ಗೆ ಹೋಗಿದ್ದರು. ರೆಗ್ಯೂಲರ್ ಚೆಕಪ್ ಮಾಡಿದ್ದ ಸಿಬ್ಬಂದಿ, ರಾಜೀವ್ ಗಾಂಧಿ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಇಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ, ಕೊರೋನಾ ಕ್ವಾರಂಟೈನ್ ನಿಯಮದಂತೆ ಜಯದೇವ ಆಸ್ಪತ್ರೆ ಸಿಬ್ಬಂದಿಯನ್ನು 10 ದಿನ ಹೋಂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.