ಬೆಂಗಳೂರು: ಮಾಜಿ ರೌಡಿಶೀಟರ್ ಅಗ್ನಿ ಶ್ರೀಧರ್‍ಗೆ ಜಾಮೀನು ಸಿಕ್ಕಿದೆ. 53 ನೇ ಸೆಷನ್ಸ್ ನ್ಯಾಯಾಲಯ 15 ದಿನಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ.
ಅಗ್ನಿ ಶ್ರೀಧರ್ ಪರವಾಗಿ ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯಪ್ಪ, ನಿರೀಕ್ಷಣಾ ಜಾಮೀನು ಇತ್ಯರ್ಥವಾಗೋವರೆಗೋ ಮಧ್ಯಂತರ ಜಾಮೀನಿಗಾಗಿಯೂ ಮನವಿ ಮಾಡಿದ್ರು. ಈ ಮನವಿಯನ್ನು ಪುರಸ್ಕರಿಸಿದ 53ನೇ ಸೆಷನ್ಸ್ ನ್ಯಾಯಾಲಯ 15 ದಿನಗಳ ಕಾಲ ಮದ್ಯಂತರ ಜಾಮೀನನ್ನು ಮಂಜೂರು ಮಾಡಿದೆ.
Advertisement
ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಮೇಲಿನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಪೊಲೀಸರು ಶ್ರೀಧರ್ ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶ ಪಡೆಸಿಕೊಂಡಿದ್ದರು. ಶ್ರೀಧರ್ ಸಹಚರರಾದ ಬಚ್ಚನ್ ಸೇರಿದಂತೆ ಇತರರನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದರು.
Advertisement
ಲಘು ಹೃದಯಾಘಾತವಾಗಿ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೆಚ್ಚಿನ ತನಿಖೆಗಾಗಿ ಬಂಧನವಾಗುವ ಸಾಧ್ಯತೆಗಳು ಇದ್ದ ಕಾರಣ ನಿರೀಕ್ಷಣಾ ಜಾಮೀನಿಗಾಗಿ ಅಗ್ನಿ ಶ್ರೀಧರ್ ಕೋರ್ಟ್ ಮೋರೆ ಹೋಗಿದ್ದರು.