ಬೆಂಗಳೂರು: ಇಡೀ ಪ್ರಪಂಚದಾದ್ಯಂತ ಕೊರೊನಾ ವೈರಸ್ ಭೀತಿ ಜನರನ್ನು ಕಾಡುತ್ತಿರೋದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರೇ ಈ ಕೊರೊನಾ ವೈರಸ್‍ಗೆ ಮದ್ದು ಕಂಡು ಹಿಡಿದುಕೊಂಡಿದ್ದಾರೆ. ಜನ ಈ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಇಂಟ್ರೆಸ್ಟಿಂಗ್ ಎಕ್ಸ್ ಕ್ಲೂಸೀವ್ ಸ್ಟೋರಿ ಇಲ್ಲಿದೆ.
Advertisement
ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ನೋಡನೋಡುತ್ತಿದಂತೆ ಬೆಂಗಳೂರಿಗೂ ಕಾಲಿಟ್ಟಿದೆ. ಜನ ಹೆಂಗೋ ಏನೋ ಅಂತ ಟೆನ್ಶನ್ ಆಗಿದ್ದಾರೆ. ಏನನ್ನು ನಂಬಬೇಕೋ ಏನನ್ನು ನಂಬಬಾರದು ಅನ್ನೋ ಕನ್ಫ್ಯೂಶನ್‍ನಲ್ಲಿದ್ದಾರೆ. ಜನರ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖದೀಮರು ಇಲ್ಲದ ಭೀತಿ ಹುಟ್ಟಿಸಿ ಜನಕ್ಕೆ ಮಂಕು ಬೂದಿ ಎರಚುತ್ತಿದ್ದಾರೆ. ಅದೇನನ್ನೋ ಕುಡಿದ್ರೆ ಕೊರೊನಾ ಹತ್ತಿರನೂ ಸುಳಿಯಲ್ಲ. ಇದನ್ನು ತಿಂದರೆ ಫುಲ್ ಸೇಫ್ ಅಂತ ತಮ್ಮ ನಕಲಿ ಪ್ರಾಡಕ್ಟ್ ಗಳನ್ನು ಸೇಲ್ ಮಾಡಿ ಹಣ ಜೇಬಿಗಿಳಿಸುತ್ತಿದ್ದಾರೆ. ಇಂತಹ ಜಾಲದ ಬಗ್ಗೆ ಸತ್ಯಾಸತ್ಯತೆ ಬಯಲು ಮಾಡಲು ಪಬ್ಲಿಕ್ ಟಿವಿ ಫೀಲ್ಡಿಗಿಳಿದಿದೆ.
Advertisement
Advertisement
ಭಯಾನಕ ವೈರಸ್‍ಗೆ ಸಿಲಿಕಾನ್ ಸಿಟಿ ಮಂದಿ ಮದ್ದು ಕಂಡು ಹಿಡಿದಿದ್ದಾರೆ. ಕೊರೊನಾ ವೈರಸ್ ನಗರದಲ್ಲಿ ಹರಡ್ತಿದೆ ಅಂತ ಗೊತ್ತಾದ ನಂತರ ನಗರದ ಕೆಲವೊಂದು ಬಾರ್ ಗಳಲ್ಲಿ ಓಟಿ ಅನ್ನೋ ಎಣ್ಣೆನ ಕೊಡ್ತಿದ್ದಾರೆ. ಇದರಿಂದ ಕೈ ಶುಚಿ ಮಾಡ್ಕೊಳ್ಳಬೇಕು ಜೊತೆಗೆ, ಅದನ್ನು ಒಂದ್ ಪೆಗ್ ಹೊಟ್ಟೆಗೆ ಹಾಕ್ಕೊಂಡ್ರೆ ಕೊರೊನಾ ವೈರಸ್ ಹತ್ತಿರಕ್ಕೂ ಸುಳಿಯಲ್ಲವಂತೆ.
Advertisement
ಈ ಬಗ್ಗೆ ನಮ್ಮ ಪಬ್ಲಿಕ್ ಟಿವಿ ತಂಡ ವ್ಯಕ್ತಿಯೊಬ್ಬರನ್ನು ವಿಚಾರಿಸಿದಾಗ:
ವರದಿಗಾರ: ಏನ್ ಸರ್ ಎಣ್ಣೆನಾ ಯಾಕೆ ಕೈಗೆ ಹಾಕ್ಕೋಳ್ತಾ ಇದ್ದೀರಾ..?
ವ್ಯಕ್ತಿ: ಎಲ್ಲಾ ಟಿವಿ, ಮೀಡಿಯಾದಲ್ಲಿ ಬರ್ತಾ ಇದೆ. ಕೊರೊನಾ ಇದೆ, ಕೊರೊನಾ ಇದೆ. ಎಚ್ಚರವಾಗಿರಿ ಅಂತಿದ್ದಾರೆ. ಅದಕ್ಕೆ ಇದನ್ನು ಹಾಕ್ಕೊಂಡ್ರೆ ಕೊರೊನಾ ಬರಲ್ವಂತೆ..
ವರದಿಗಾರ: ಯಾರ್ ಹೇಳಿದ್ದು ಇದನ್ನು ಹಾಕ್ಕೊಂಡ್ರೆ ಕೊರೊನಾ ಬರಲ್ಲ ಅಂತ..?
ವ್ಯಕ್ತಿ: ವಾಟ್ಸ್‍ಪ್‍ನಲ್ಲಿ ಬರುತ್ತಿದೆ. ನಮ್ ಫ್ರೆಂಡ್ಸ್ ಕೂಡ ಹೇಳ್ತಿದ್ದಾರೆ. ದಿನಾ ಕುಡಿಯೋರು ನಾವು, ನೋಡೋಣ ಇದು ಅಂತ ಅಷ್ಟೆ..
ವರದಿಗಾರ: ಇದು ಬರೆ ಕೈಗೆ ಹಾಕ್ಕೊಳ್ಳೋಕೆ ಮಾತ್ರ ನಾ, ಇದನ್ನ ಕುಡಿಯಲ್ವಾ..?
ವ್ಯಕ್ತಿ: ಇಲ್ಲ, ಇದನ್ನು ಕೈಗೆ ಶುಚಿಯಾಗಿ ಇರೋಕೆ ಹಾಕ್ತೀವಿ. ಆಮೇಲೆ ಮಿಕ್ರೆ ಕುಡಿತೀವಿ..
ವರದಿಗಾರ: ಮನೇಲಿ ಇದ್ದಾಗಲೂ ಇದೇ ರೀತಿ ಮಾಡ್ತೀರಾ..?
ವ್ಯಕ್ತಿ: ಇಲ್ಲ, ಮನೇಲಿ ಮಾಡೋಕಾಗುತ್ತಾ..! ಇಲ್ಲಿ ಮಾತ್ರ ಈ ರೀತಿ ಮಾಡ್ತೀವಿ..
ಹೀಗೆ ಯಾವುದೇ ವೈದ್ಯರು ಹೇಳದೇ ಇದ್ದರೂ ಕುಡುಕರು ವಾಟ್ಸಪ್, ಫೆಸ್ಬುಕ್ ನಲ್ಲಿ ಬರೋ ಮಸೇಜ್ ಗಳಿಗೆ ಭಯಬಿದ್ದು ಈ ರೀತಿ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ. ಇಂತಹ ವದಂತಿಗಳು ಇಲ್ಲಿ ಮಾತ್ರವಲ್ಲ ಇರಾನ್‍ನಲ್ಲೂ ಇದೆ. ಅಲ್ಲಿಯೂ ಇದೇ ರೀತಿ ಎಣ್ಣೆಯನ್ನು ನಂಬಿಕೊಂಡು 20 ಮಂದಿ ಪ್ರಾಣಬಿಟ್ಟಿದ್ದಾರೆ. ಸಾಲದಕ್ಕೆ ಇಸ್ರೇಲ್‍ನ ಧರ್ಮಗುರುವೊಬ್ಬರು ಮೆಕ್ಸಿಕೋ ಮೂಲಕ ಕೊರೊನಾ ಹೆಸರಿನ ಮದ್ಯ ಕುಡಿಯಿರಿ ಅಂತ ಹೇಳಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾನೆ. ಅಷ್ಟಕ್ಕೂ ಯಾವುದೇ ಎಣ್ಣೆಯಿಂದ ಕೊರೊನಾ ಗುಣವಾಗಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.