ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎಫೆಕ್ಟ್ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿದೆ. ಟಿಕ್ ಟಾಕ್ ಟ್ರೆಂಡ್, ಕಾಲರ್ ಟ್ಯೂನ್ ಟ್ರೆಂಡ್ ಹೀಗೆ ಕೊರೊನಾ ಎಫೆಕ್ಟ್‍ಗೆ ಸಿಕ್ಕಾಪಟ್ಟೆ ಪರಿಣಾಮ ಬೀರಿದೆ. ಇವತ್ತು ವಿಧಾನ ಪರಿಷತ್‍ನಲ್ಲೂ ಕೊರೊನಾ ಎಫೆಕ್ಟ್ ಗೆ ಸಖತ್ ಸದ್ದು ಮಾಡಿತು. ಕೊರೊನಾ ಎಫೆಕ್ಟ್ ಗೆ ಪರಿಷತ್ ಎಸಿ ಆಫ್ ಮಾಡಲಾಗಿತ್ತು. ಎಸಿ ಆಫ್ ಆಗಿದ್ದಕ್ಕೆ ಅವಸ್ಥೆ ಪಟ್ಟ ಪರಿಷತ್ ಸದಸ್ಯರು ಶೆಕೆ ತಡೆಯಲಾರದೆ ಎಸಿ ಮತ್ತೆ ಹಾಕಿಸಿಕೊಂಡರು.
ಕಡಿಮೆ ಉಷ್ಣಾಂಶದಲ್ಲಿ ಕೊರೊನಾ ವೈರಸ್ ಬೇಗ ಹರಡುತ್ತದೆ ಅನ್ನೋ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರದ ಕಲಾಪದಲ್ಲಿ ಸಭಾಪತಿಗಳು ಸಭಾಂಗಣದ ಎಸಿಯನ್ನು ಆಫ್ ಮಾಡಿಸಿದರು. ಎಸಿ ಆಫ್ ಮಧ್ಯೆ ಸದನದಲ್ಲಿ ಚರ್ಚೆ ನಡೆದಿತ್ತು. ಕಲಾಪ ಪ್ರಾರಂಭವಾಗಿ ಒಂದು ಗಂಟೆ ಕಳೆಯುವ ಹೊತ್ತಿಗೆ ಸದಸ್ಯರಿಗೆ ಸೆಕೆ ಆರಂಭವಾಯಿತು. ಸೆಕೆಯನ್ನು ತಡೆಯಲಾರದ ಪರಿಷತ್ ಸದಸ್ಯರು ಸೆಕೆಗೆ ಒದ್ದಾಡಿದರು. ಕೂಡಲೇ ಎದ್ದು ನಿಂತ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ತುಂಬಾ ಸೆಕೆ ಆಗುತ್ತಿದೆ. ಎಸಿ ಆನ್ ಮಾಡಿ ಎಂದು ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಉಪ ಸಭಾಪತಿಗಳು ಕೂಡಲೇ ಎಸಿ ಆನ್ ಮಾಡಿಸಿದರು.
Advertisement
Advertisement
ಸದನ ಪ್ರಾರಂಭವಾದ ಕೂಡಲೇ ಸಾಮಾನ್ಯವಾಗಿ ಎಸಿ ಆನ್ ಇರುತ್ತೆ. ಆದರೆ ಇಂದಿನ ಕಲಾಪದಲ್ಲಿ ಮಧ್ಯಾಹ್ನ ಎಸಿ ಆಫ್ ಮಾಡಲಾಗಿತ್ತು. ಆದರೆ ಎಸಿ ಆಫ್ ಮಾಡಿರೋದನ್ನು ಹೇಳಲಾಗದೆ ಪತ್ರಕರ್ತರು ಒದ್ದಾಡುತ್ತಿದ್ದರು. ಕೊನೆಗೆ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರೇ ವಿಷಯ ಪ್ರಸ್ತಾಪ ಮಾಡಿ ಎಸಿ ಪ್ರಸಂಗಕ್ಕೆ ತೆರೆ ಎಳೆದರು.