ಬೆಂಗಳೂರು: ಈ ಹಿಂದೆ ಬೊಮ್ಮಾಯಿ ಸರ್ಕಾರದ ವಿರುದ್ಧ ಕಮೀಷನ್ ಬಾಂಬ್ ಹಾಕಿದ್ದ ಗುತ್ತಿಗೆದಾರರ ಸಂಘ (Contractors Association) ಇದೀಗ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧವೂ ತಿರುಗಿಬೀಳುವ ಮುನ್ಸೂಚನೆ ನೀಡಿದೆ.
ಜುಲೈ 15ರೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಬೀದಿಗಿಳಿಯುವುದಾಗಿ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕಾಮಗಾರಿಗಳ ಬಿಲ್ ತಡೆಹಿಡಿಯಲಾಗಿತ್ತು. ಇದನ್ನೂ ಓದಿ: Mysuru Bengaluru Expressway ಪ್ರಯಾಣಕ್ಕೆ ಸ್ಪೀಡ್ ಲಿಮಿಟ್ – 100 ಕಿಮೀ ವೇಗ ದಾಟಿದ್ರೆ ಫೈನ್!
Advertisement
Advertisement
ಕಳೆದ ವಾರ ರಾಜ್ಯ ಗುತ್ತಿಗೆದಾರರ ಸಂಘ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬಾಕಿ ಬಿಡುಗಡೆಗೆ ಒತ್ತಾಯಿಸಿತ್ತು. ಸಂಘದ ಮನವಿಯನ್ನು ಪುರಸ್ಕರಿಸಿದ ಸರ್ಕಾರ ಪೆಂಡಿಂಗ್ ಬಿಲ್‍ಗಳ ಬಿಡುಗಡೆಗೆ ಜೂನ್ 28 ರಂದು ಸುತ್ತೋಲೆ ಕೂಡ ಹೊರಡಿಸಿತ್ತು. ಆದರೆ ಈ ಆದೇಶ ಹೊರಡಿಸಿ ಒಂದು ವಾರ ಕಳೆದರೂ ಹಣ ಮಾತ್ರ ಬಿಡುಗಡೆ ಮಾಡಿಲ್ಲ.
Advertisement
ಸರ್ಕಾರದ ಆದೇಶ ಬರೀ ಸುತ್ತೋಲೆಗಷ್ಟೇ ಸೀಮಿತವಾಗಿದೆ. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗುತ್ತಿಗೆದಾರರು ಸರ್ಕಾರದ ನಡೆಯಿಂದ ಕಂಗಾಲಾಗಿದ್ದಾರೆ. ಜುಲೈ 15ರೊಳಗೆ ಹಣ ರಿಲೀಸ್ ಮಾಡದಿದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಹಿಂದೆ ಪಾಲಿಕೆಯ ಎಲ್ಲ ಎಂಟು ವಲಯಗಳ ಮುಖ್ಯ ಇಂಜಿನಿಯರ್‌ಗಳಿಗೆ (Chief Engineer) ಪತ್ರ ಬರೆದಿದ್ದ ಸಂಘ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ ಅನುದಾನದಲ್ಲಿ ಬಿಡುಗಡೆಯಾದ ಒಟ್ಟು 650 ಕೋಟಿ ರೂ. ಹಣ ಇಲ್ಲಿಯವರೆಗೂ ಗುತ್ತಿಗೆದಾರರ ಕೈ ಸೇರಿಲ್ಲ. ಏಪ್ರಿಲ್ 2021ರಿಂದ ಮೇ 2023ರವರೆಗಿನ ನಡೆಸಿದ ಕಾಮಗಾರಿಗಳ ಬಿಲ್ ಬಾಕಿಯಿದೆ. ಅಷ್ಟೇ ಅಲ್ಲದೇ ಎಲ್‌ಒಸಿ ಬಿಡುಗಡೆಯಾಗಿರುವ ಕಾಮಗಾರಿಗಳ ಪಾವತಿಗಳನ್ನೂ ಸಹ ತಡೆ ಹಿಡಿಯಲಾಗಿದೆ. ಒಂದು ವೇಳೆ ಹಣ ಬಿಡುಗಡೆ ಮಾಡದೇ ಹೋದರೆ ಬೆಂಗಳೂರಿನ ಎಲ್ಲ ಕಾಮಗಾರಿ ಹಾಗೂ ಕೆಲಸ ತಡೆ ಹಿಡಿಯುವುದಾಗಿ ಎಚ್ಚರಿಕೆ ನೀಡಿತ್ತು.
Web Stories