ಬೆಂಗಳೂರು: ಪೊಲೀಸ್ ಸೋಷಿಯಲ್ ಮೀಡಿಯಾ ಖಾತೆಗೆ ಹೊಸ ಛಾಪು ಮೂಡಿಸಿದ್ದ ಬೆಂಗಳೂರಿನ (Bengaluru) ಕಾನ್ಸ್‌ಟೇಬಲ್ ಎಚ್.ಎಂ ಲೋಕೇಶ್, ಮೆಕ್ಸಿಕೋ (Mexico) ಭಾರತೀಯ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.
Heartiest congratulations to Police Constable Lokesh for being deputed to Indian Embassy, Mexico. A passionate Kannadiga upgraded himself to skills of Communication, Computers and English. In a gruelling interview, amongst Police inspectors, he was selected to serve abroad.… pic.twitter.com/JDyqJ2X9Is
— Bhaskar Rao (@Nimmabhaskar22) March 23, 2023
Advertisement
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ (Police Commissioner Office)ಸೋಷಿಯಲ್ ಮೀಡಿಯಾ (Social media) ವಿಭಾಗದಲ್ಲಿ ಲೋಕೇಶ್ ಕೆಲಸ ಮಾಡುತ್ತಿದ್ದರು. ಸಂವಹನ, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಕೌಶಲ್ಯ ಹೊಂದಿದ್ದ ಅವರು ಕೊರೊನಾ (COVID-19) ಸಮಯದಲ್ಲಿ ನಾಗರಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಜನರ ಸಂದೇಹಗಳಿಗೆ ಉತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದನ್ನೂ ಓದಿ: ಐದನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಓರ್ವ ಬಂಧನ
Advertisement
Advertisement
ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್, ಮೇಘರಿಕ್, ಸುನೀಲ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್ ಮತ್ತು ಪ್ರತಾಪ್ ರೆಡ್ಡಿ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದರು. ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗಾಗಿ ವಿವಿಧ ಹಂತಗಳಲ್ಲಿ ಸಂದರ್ಶನ ಎದುರಿಸಿದ್ದರು. ಇದನ್ನೂ ಓದಿ: 4 ವರ್ಷಗಳ ಬಳಿಕ ಬೇಗನೆ 100 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ