ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‍ಪಿ)ಸಭೆ ನಾಯಕ ಹಾಗೂ ವಿಪಕ್ಷ ನಾಯಕ ಸ್ಥಾನ ಆಯ್ಕೆ ಬಗ್ಗೆ ಹೈಕಮಾಂಡ್‍ಗೆ ಇಂದು ವರದಿ ತಲುಪಲಿದೆ.
ಎಐಸಿಸಿ ವೀಕ್ಷಕರಾಗಿ ಬಂದಿದ್ದ ಮಧುಸೂದನ್ ಮಿಸ್ತ್ರಿ ವರದಿ ಸಿದ್ಧಪಡಿಸಿದ್ದು, ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಸಿಗಲಿದ್ದು, ಸಿಎಲ್‍ಪಿ ಸ್ಥಾನ ತಪ್ಪಲಿದೆ. ಸಿಎಲ್‍ಪಿ ನಾಯಕರಾಗಿ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ ಎಚ್.ಕೆ ಪಾಟೀಲ್ ಅವರಿಗೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇದೇ 10ಕ್ಕೆ ಅಧಿವೇಶನ ಆರಂಭವಾಗಲಿದ್ದು, 9ರ ಸಂಜೆ ಪ್ರಕಟವಾಗಲಿದೆ ಎನ್ನಲಾಗುತ್ತಿದೆ.
Advertisement
Advertisement
ಇತ್ತ ಕಾಂಗ್ರೆಸ್ಸಿಗೆ ಯಾವ ವ್ಯಕ್ತಿಯೂ ಅನಿವಾರ್ಯವಲ್ಲ ಎಂದು ಸಿದ್ದರಾಮಯ್ಯಗೆ ಮಾಜಿ ಸಂಸದ ಮುನಿಯಪ್ಪ ತಿವಿದಿದ್ದಾರೆ. ಈ ಮಧ್ಯೆ, ಸಚಿವ ಈಶ್ವರಪ್ಪ ತಮ್ಮ ಅಳಿಯನಿಗಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆಪ್ತ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಬೆಂಗಳೂರು ವಿಭಾಗದಲ್ಲಿದ್ದ ಎಂಟಿಬಿ ಆಪ್ತ, ಪದ್ಮನಾಭ್ ಜಾಗಕ್ಕೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಅಳಿಯ ಕೆ.ಸಿ ಶ್ರೀನಿವಾಸ್ ಅವರನ್ನು ತಂದಿದ್ದಾರೆ. ಇದನ್ನೂ ಓದಿ: ‘ಕಾಂಗ್ರೆಸ್ ಪಕ್ಷಕ್ಕೆ ಯಾವ ವ್ಯಕ್ತಿಯೂ ಅನಿವಾರ್ಯ ಅಲ್ಲ’- ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿವಿದ ಮುನಿಯಪ್ಪ