ಬೆಂಗಳೂರು: ತಮ್ಮ ತಮ್ಮಲ್ಲಿಯೇ ಕಚ್ಚಾಟಕ್ಕೆ ಮುಂದಾದ ರಾಜ್ಯ ಕೈ ನಾಯಕರಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೂ ಮೂಗುದಾರ ಹಾಕಲು ಹೈಕಮಾಂಡ್ ನಿರ್ಧಾರ ಮಾಡಿದೆ. ರಾಜ್ಯ ಕಾಂಗ್ರೆಸ್ಸಿನ ಸ್ಥಾನಮಾನಗಳ ಘೋಷಣೆ ಜೊತೆ ಜೊತೆಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಮನ್ವಯ ಸಮಿತಿ ರಚಿಸುವಂತಹ ಮಹತ್ವದ ನಿರ್ಧಾರವನ್ನು ಪ್ರಕಟಿಸಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ಆ ಅಸ್ತ್ರದ ಮೂಲಕ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಮೇಲೆ ಹಿಡಿತ ಸಾಧಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಇರಲಿ, ಟ್ರಬಲ್ ಶೂಟರ್ ಡಿಕೆಶಿ ಇರಲಿ ಇಲ್ಲವೇ ಮೂಲ ಕಾಂಗ್ರೆಸ್ಸಿಗರೇ ಆಗಿರಲಿ. ಎಲ್ಲರೂ ಒಂದೇ ಅನ್ನೋ ದಾಳ ಉರುಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯ ಕಾಂಗ್ರೆಸ್ಸಿಗರ ಮೇಲೆ ಹಿಡಿತ ಸಾಧಿಸಲು ಆ ದಾಳ ಉರುಳಿಸಲು ಹೈಕಮಾಂಡ್ ನಿರ್ಧರಿಸಿದೆ. ಸ್ಥಾನಮಾನಗಳ ಜೊತೆ ಜೊತೆಗೆ ರಾಜ್ಯ ಕೈ ನಾಯಕರನ್ನ ಸೈಲೆಂಟ್ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿ ರಚನೆಗೆ ನಿರ್ಧರಿಸಿದೆ. ರಾಜ್ಯದ ಹಿರಿಯ ನಾಯಕರ ಜೊತೆಗೆ ಎಐಸಿಸಿಯ ನಾಯಕರು ಸಹ ಸಮನ್ವಯ ಸಮಿತಿಯಲ್ಲಿ ಇರಲಿದ್ದಾರೆ.
Advertisement
Advertisement
ರಾಜ್ಯ ಕಾಂಗ್ರೆಸ್ಸಿನಲ್ಲಿ ಏನೇ ತೀರ್ಮಾನ ಆಗಬೇಕಾದರೂ ಸಮನ್ವಯ ಸಮಿತಿಯ ಅಂತಿಮ ಮುದ್ರೆ ಬೇಕೇ ಬೇಕು. ಹೀಗೆ ರಾಜ್ಯ ಕಾಂಗ್ರೆಸ್ ನಾಯಕರ ಕಚ್ಚಾಟ ತಪ್ಪಿಸಲು ಸಮನ್ವಯ ಸಮಿತಿ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ರಾಜ್ಯ ಕಾಂಗ್ರೆಸ್ಸಿನಲ್ಲಿ ನಾನೇ ಪವರ್ ಫುಲ್ ನನ್ನ ಮಾತೇ ನಡೆಯೋದು ಅಂದು ಕೊಂಡವರಿಗೆಲ್ಲ ಇನ್ನು ಬ್ರೇಕ್ ಬೀಳಲಿದೆ. ಮಾಜಿ ಸಿಎಂ ಸಿದ್ದರಾಮಯ್ಯರ 11 ವರ್ಷದ ಚಕ್ರಾಧಿಪತ್ಯಕ್ಕೂ ಲಗಾಮು ಬೀಳಲಿದೆ ಎಂಬುದಾಗಿ ತಿಳಿದುಬಂದಿದೆ.
Advertisement