ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆಯ ಆರೋಪದ ಮೇಲೆ ಜೈಲು ಸೇರಿ ನಂತರ ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಇದೀಗ ಚುನಾವಣಾ ರಾಜಕೀಯದ ಸಮೀಕರಣಗಳೇ ಅದಲು-ಬದಲಾಗಿದೆ.
ಉಪಸಮರದಲ್ಲಿ 15 ಕ್ಷೇತ್ರ ಗೆಲ್ಲಲು ಕಮಲ ಪಡೆ ರಣತಂತ್ರ ರೂಪಿಸಿತ್ತು. ಆದರೆ ಇದೀಗ ಡಿಕೆಶಿ ಕಂಬ್ಯಾಕ್ ಬಿಜೆಪಿ ನಾಯಕರ ನಿದ್ದೆ ಕೆಡಿಸಿದೆ. ಹೀಗಾಗಿ ಡಿಕೆಶಿ ಎಂಟ್ರಿ ಬೆನ್ನಲ್ಲೇ ಸ್ಟ್ರಾಟೆಜಿ ಚೇಂಜ್ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಹೊಸಕೋಟೆ, ಯಶವಂತಪುರ, ಕೆ.ಆರ್.ಪುರ, ಚಿಕ್ಕಬಳ್ಳಾಪುರ, ಗೋಕಾಕ್ ಈ ಪಂಚ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ನೀಡಿದೆ. ಹೀಗಾಗಿ ಈ ಐದು ಕ್ಷೇತ್ರಗಳ ಮೇಲೆ ಕಮಲ ಪಡೆ ವಿಶೇಷ ಗಮನ ಕೊಟ್ಟಿದ್ದು, ಡಿಕೆಶಿ ಅಸ್ತ್ರಗಳಿಗೆ ಪ್ರತಿ ಅಸ್ತ್ರ ರೂಪಿಸಲು ಬಿಜೆಪಿ ಮುಂದಾಗಿದೆ.
Advertisement
ಈ ಪಂಚ ಕ್ಷೇತ್ರಗಳಲ್ಲಿ ಮಾತ್ರ ಅನರ್ಹರು ಯಾವುದೇ ಕಾರಣಕ್ಕೂ ಸೋಲಬಾರದು. ಬಿಜೆಪಿ ಹೈಕಮಾಂಡ್ ಫಿಕ್ಸ್ ಆಗಿದ್ದು, ಇದಕ್ಕಾಗಿ ಪಂಚತಂತ್ರ ಹೆಣಿಯಲು ಕಂಪ್ಲೀಟ್ ಪಿಕ್ಚರ್ ಕೇಳಿದೆ. ಇದರ ಜೊತೆಗೆ ಉಳಿದ 10 ಕ್ಷೇತ್ರಗಳ ಬಗ್ಗೆಯೂ ಮತ್ತೊಂದು ರಿಪೋರ್ಟ್ ಕೇಳಿದೆ. 10 ಕ್ಷೇತ್ರಗಳಲ್ಲಿ ಹೇಗಿದೆ ಪರಿಸ್ಥಿತಿ? ಕ್ಷೇತ್ರಗಳ ಜನರ ಮನಸ್ಥಿತಿ ಏನು? ಪಕ್ಷದ ಮುಖಂಡರು ಎಷ್ಟರ ಮಟ್ಟಿಗೆ ಅನರ್ಹರನ್ನು ಬೆಂಬಲಿಸ್ತಾರೆ? ಹೀಗೆ ಹಲವು ವಿವರ ಕುರಿತಂತೆ 2ನೇ ರಿಪೋರ್ಟನ್ನು ಬಿಜೆಪಿ ಹೈಕಮಾಂಡ್ ಕೇಳಿದೆ ಎನ್ನಲಾಗಿದೆ.