ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಕೆಲವೊಂದು ವಿಚಾರದಲ್ಲಿ ಬಹಳ ಶಿಸ್ತು. ಊಟ, ತಿಂಡಿ, ವಾಕಿಂಗ್ ವಿಚಾರದಲ್ಲಂತೂ ಅವರದ್ದು ಮಿಸ್ಟರ್ ಪರ್ಫೆಕ್ಟ್. ಮನೆಯಲ್ಲಿದ್ದಾಗಲೂ ಅಷ್ಟೇ, ಹೊರಗೆ ಹೋದಾಗಲೂ ಅಷ್ಟೇ. ಫುಡ್ ಸ್ಟೈಲ್ ಮಾತ್ರ ಚೇಂಜ್ ಆಗೋದು ಕಷ್ಟ. ಅಂತಹ ಯಡಿಯೂರಪ್ಪಗೆ ದಾವೋಸ್‍ನಲ್ಲೂ ಅವರ ಕೇಳಿದ ತಿಂಡಿ, ಊಟದ ವ್ಯವಸ್ಥೆ ಆಗ್ತಿದೆಯಂತೆ. ಅದೇ ಯಡಿಯೂರಪ್ಪ ಉಪ್ಪಿಟ್ಟು ಟೇಸ್ಟು.
ಹೌದು. ಯಡಿಯೂರಪ್ಪಗೆ ಉಪ್ಪಿಟ್ಟು ಅಂದ್ರೆ ಬಲು ಇಷ್ಟ. ಬೆಳಗ್ಗೆ ತಿಂಡಿಗೆ ಅವರಿಗೆ ವೆರೈಟಿ ಐಟಂ ಇರಬೇಕು. ಕನಿಷ್ಠ ಮೂರು ವೆರೈಟಿ ಆದರೂ ಇರಬೇಕು. ಉಪ್ಪಿಟ್ಟು, ರೊಟ್ಟಿ, ದೋಸೆ, ಇಡ್ಲಿ, ವಡೆ ಅವರಿಗೆ ತಿಂಡಿಯಲ್ಲಿ ಮಾಮೂಲಿ ಐಟಂ. ಆದರೆ ಇದೀಗ ಯಡಿಯೂರಪ್ಪ 6 ದಿನಗಳ ಕಾಲ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಈಗ ಅವರ ಫುಡ್ ಕಲ್ಚರ್ ಚೇಂಜ್ ಆಗುತ್ತಾ ಅನ್ನೋ ಕುತೂಹಲವಿತ್ತು. ಆದರೆ ಫುಡ್‍ನಲ್ಲಿ ದೊಡ್ಡ ಬದಲಾವಣೆಯೇನೂ ಆಗಿಲ್ಲವಂತೆ. ದಾವೋಸ್‍ಗೆ ಹೋದಾಗಿನಿಂದ ಯಡಿಯೂರಪ್ಪಗೆ ನಮ್ ಕಲ್ಚರ್ ಫುಡ್ ಆಗುತ್ತಿದೆ ಅನ್ನೋದು ಲೇಟೆಸ್ಟ್ ಸುದ್ದಿ.
Advertisement
Advertisement
ಯಡಿಯೂರಪ್ಪ ದಾವೋಸ್‍ಗೆ ಪ್ರಯಾಣ ಬೆಳೆಸಿದ ಮಾರನೇ ದಿನ ಸೋಮವಾರ ಯಡಿಯೂರಪ್ಪ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು ತಿಂದ್ರಂತೆ. ಆಗಲೇ ನಾಳೆಗೆ ರವೆ ಉಪ್ಪಿಟ್ಟು ಸಿಗಬಹುದಾ ಅಂತ ಪ್ರಶ್ನೆ ಮಾಡಿದ್ರಂತೆ. ಯಡಿಯೂರಪ್ಪ ಕೇಳಿದ್ದಕ್ಕೆ ರವೆ ಉಪ್ಪಿಟ್ಟು, ವಡೆ, ಇಡ್ಲಿಯನ್ನ ಅಧಿಕಾರಿಗಳು ರೆಡಿ ಮಾಡಿಸಿದ್ದಾರೆ. ಇವತ್ತು ಮಂಗಳವಾರ ಬೆಳಗ್ಗೆ ಉಪ್ಪಿಟ್ಟು, ವಡೆ, ಇಡ್ಲಿ ತಿಂದು ಯಡಿಯೂರಪ್ಪ ಸೂಪರ್ ಅಂದ್ರಂತೆ. ಅಷ್ಟೇ ಅಲ್ಲ ನಮ್ ತಿಂಡಿ ಸಿಕ್ಕಿದ್ಮೇಲೆ ಅವರ ಲವಲವಿಕೆ ಹೆಚ್ಚಾಗಿದ್ದು, ಸಿಂಗಲ್ ವಾಕಿಂಗ್ ಜೋರಾಗಿಯೇ ನಡೆಯುತ್ತಿದೆ ಅಂತೆ. ಯಡಿಯೂರಪ್ಪ ಉಪ್ಪಿಟ್ಟು ತಿಂದ್ರೆ ಬೇರೆ ಅಧಿಕಾರಿಗಳು ಅಯ್ಯೋ ನಮ್ಗೆ ಹೊಸ ಟೇಸ್ಟ್ ನೋಡೋಣ ಅಂತ ವೆರೈಟಿ ಹುಡುಕುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.