ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಗಳ ಮುಕ್ತಾಯಕ್ಕೆ ಡೆಡ್‌ಲೈನ್ ನೀಡಿದ್ದಾರೆ. ಡಿಸೆಂಬರ್ ಒಳಗಡೆ 120 ಕಿಮೀ ವೈಟ್ ಟಾಪಿಂಗ್ ರಸ್ತೆ ಸಂಚಾರಕ್ಕೆ ಮುಕ್ತ ಆಗಬೇಕು ಎಂದು ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ. ಮತ್ತೆ ಹೊಸದಾಗಿ 250 ಕಿಮೀ ವೈಟ್ ಟಾಪಿಂಗ್ ಮಾಡೋದಕ್ಕೆ ಪ್ಲ್ಯಾನ್ ಆಗಿದೆ.
ನಗರದಲ್ಲಿ ಹಲವು ಕಡೆ ವೈಟ್ ಟಾಪಿಂಗ್ ಕಾಮಗಾರಿ ಆಗುತ್ತಿದೆ. ಆದರೆ, ನಿಗದಿತ ಸಮಯಕ್ಕೆ ವೈಟ್ ಕಾಮಗಾರಿ ಮುಗಿಯುತ್ತಿಲ್ಲ. ಮೂರು ತಿಂಗಳಲ್ಲಿ ಒಂದೇ ರಸ್ತೆ ಮುಗಿಸುತ್ತೇವೆ ಅಂತಾರೆ. ಆದರೆ ಐದಾರು ತಿಂಗಳಾದರೂ ವೈಟ್ ಟಾಪಿಂಗ್ ಕಾಮಗಾರಿ ಮುಕ್ತಾಯ ಆಗಲ್ಲ. ಇದರಿಂದ ಬೆಂಗಳೂರಿನಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ವೈಟ್ ಟಾಪಿಂಗ್ ಕಾಮಗಾರಿ ಬೇಗ ಮುಗಿಸೋಕೆ ಸಚಿವ ಕೃಷ್ಣ ಬೈರೇಗೌಡ ಇಂಜಿನಿಯರ್‌ಗಳಿಗೆ ಡೆಡ್‌ಲೈನ್ ನೀಡಿದ್ದಾರೆ.
ಎರಡನೇ ಹಂತದಲ್ಲಿ 120 ಕಿಮೀ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ 60 ಕಿಮೀ ವೈಟ್ ಟಾಪಿಂಗ್ ಕಾಮಗಾರಿ ಮುಕ್ತಾಯ ಆಗಿದೆ. ಇನ್ನುಳಿದ 60 ಕಿಮೀ ವೈಟ್ ಟಾಪಿಂಗ್ ಕಾಮಗಾರಿ ಡಿಸೆಂಬರ್ ಒಳಗಡೆ ಮುಗಿಸಲು ಡೆಡ್‌ಲೈನ್ ನೀಡಿದ್ದಾರೆ.
120 ಕಿಮೀ ವೈಟ್ ಟಾಪಿಂಗ್ ಈ ವರ್ಷದ ಒಳಗಡೆ ಮುಗಿಯುತ್ತಿದ್ದಂತೆ ಮತ್ತೊಂದು ಹಂತದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳೋದಕ್ಕೆ ಮುಂದಾಗಿದೆ ಬಿ-ಸ್ಮೈಲ್. 250 ಕಿಮೀ ವೈಟ್ ಟಾಪಿಂಗ್ ಮಾಡ್ತೇವೆ. ಮುಖ್ಯರಸ್ತೆ ಮತ್ತು ಪ್ರಮುಖ ರಸ್ತೆಗಳನ್ನ ಗುರುತು ಮಾಡ್ತಾ ಇದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.



