ಬೆಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ರಾಜ್ಯದ ಹಲವೆಡೆ ಮಳೆ (Rain) ಆರಂಭಗೊಂಡಿದೆ. ಬೆಂಗಳೂರಿನ (Bengaluru) ಹಲವೆಡೆ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಮೈಸೂರು ರೋಡ್, ದೀಪಾಂಜಲಿ ನಗರ, ಬಾಪೂಜಿನಗರ, ನಾಯಂಡನಹಳ್ಳಿ, ಅತ್ತಿಗುಪ್ಪೆ, ಮೈಸೂರು ಸರ್ಕಲ್, ಚಾಮಾರಾಜಪೇಟೆ, ಕೆ ಆರ್ ಮಾರ್ಕೆಟ್, ಬಿನ್ನಿಮಿಲ್, ಚಿಕ್ಕಪೇಟೆ, ಮೆಜೆಸ್ಟಿಕ್ ಭಾಗಗಳಲ್ಲಿ ಮಳೆಯಾಗಿದೆ. ಮಳೆಗೆ ಮೈಸೂರು ರಸ್ತೆಯಲ್ಲಿ ನೀರು ನಿಂತಿದೆ. ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿಯೂ ನೀರು ನಿಂತಿದ್ದು ರಸ್ತೆ ಕೆರೆಯಂತಾಗಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: 200 ಸಂಚಿಕೆ ಪೂರೈಸಿದ ಪಬ್ಲಿಕ್ ಟಿವಿ ಬೆಳಕು – ಕುಶಾಲನಗರ ಸರ್ಕಾರಿ ಶಾಲೆಯ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿದ ಸಿಎಂ
Advertisement
ನಗರದ ಟೌನ್ ಹಾಲ್, ಕೆಆರ್ ಮಾರ್ಕೆಟ್, ಕಾರ್ಪೋರೇಷನ್, ಕಲಾಸಿಪಾಳ್ಯ, ಲಾಲ್‍ಬಾಗ್, ಶಾಂತಿನಗರ, ಜಯನಗರ, ಮೆಜೆಸ್ಟಿಕ್, ವಿಧಾನಸೌಧ, ವಿಲ್ಸನ್ ಗಾರ್ಡನ್, ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಭಾಗಗಳಲ್ಲಿ ಜೋರು ಮಳೆಯಾಗಿದೆ. ಅಲ್ಲದೇ ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ಅಲ್ಲದೇ ಹೆಬ್ಬಾಳ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಶೇಷಾದ್ರಿಪುರ, ಸದಾಶಿವನಗರ, ಮೇಖ್ರಿ ಸರ್ಕಲ್, ಆರ್‍ಟಿ ನಗರ, ಯಲಹಂಕ ಭಾಗದಲ್ಲೂ ಭಾರೀ ಮಳೆಯಾಗಿದೆ. ಶಿವಾನಂದ ಅಂಡರ್ ಪಾಸ್ ರಸ್ತೆಯ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಮಳೆಯ ಪರಿಣಾಮ ಶಿವಾನಂದ ಸರ್ಕಲ್ ಅಕ್ಕ ಪಕ್ಕ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಅಂಡರ್‍ಪಾಸ್ ಬಳಿ ಡ್ರೈನೇಜ್ ಗುಂಡಿಯೊಂದು ತೆರೆದ ಸ್ಥಿತಿಯಲ್ಲಿದ್ದು, ಮೂರು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಗುಂಡಿಗೆ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾಗಿದ್ದ. ಈ ನಿಟ್ಟಿನಲ್ಲಿ ಜನರು ಎಚ್ಚರಿಕೆಯಿಂದ ಓಡಾಡಬೇಕಿದೆ.
Advertisement
ಹಲವೆಡೆ ನಾಳೆಯಿಂದ ಮೂರು ದಿನ ಮಳೆ ಮುನ್ಸೂಚನೆ ಇದ್ದು, ದಕ್ಷಿಣ ಒಳನಾಡಿಗೆ ಮುಂದಿನ ಮೂರು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಕೋಲಾರ, ಮೈಸೂರು, ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ರಾಯಚೂರು, ಕಲಬುರಗಿ, ಹಾವೇರಿ, ಕೊಪ್ಪಳ, ಗದಗದಲ್ಲಿ ತಾಪಮಾನ ಹೆಚ್ಚಳ ಸಾಧ್ಯತೆ ಇದೆ. 2-3 ಡಿಗ್ರಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿರುವ ಹಾಸನದ ಜನರ ಕರೆತರಲು ಹೆಚ್‍ಡಿಡಿ ಪ್ರಯತ್ನ
ಮಂಡ್ಯ, ಮೈಸೂರು ಮತ್ತು ಕೊಡಗಿನಲ್ಲಿ ಉತ್ತಮ ಮಳೆ ದಾಖಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಹೋಬಳಿ: ತಾಲೂಕು: ಮಳೆ ಮಿ.ಮೀ.ನಲ್ಲಿ
ಜಯಮಂಗಲ: ಮಾಲೂರು: 46ಮಿ.ಮೀ
ಗೊಲ್ಲಹಳ್ಳಿ: ಬೆಂಗಳೂರು: 52ಮಿ.ಮೀ
ಕೆಂಗೇರಿ: ಬೆಂಗಳೂರು: 57ಮಿ.ಮೀ
ನಾಗಪುರ: ಬೆಂಗಳೂರು: 44ಮಿ.ಮೀ
ಜಯಮಂಗಲ: ರಾಮನಗರ: 52ಮಿ.ಮೀ
ಹುಲಿಕೆರೆಗುನ್ನೂರು: ರಾಮನಗರ: 50ಮಿ.ಮೀ
ಪಾಂಡವಪುರ: ಮಂಡ್ಯ: 63ಮಿ.ಮೀ
ಸೋಮೇಶ್ವರಪುರ: ಮೈಸೂರು: 48ಮಿ.ಮೀ
ವರುಣ: ಮೈಸೂರು: 47ಮಿ.ಮೀ
ಬಲ್ಲೇನಹಳ್ಳಿ: ಶ್ರೀರಂಗಪಟ್ಟಣ: 63ಮಿ.ಮೀ
ಹಾರೋಹಳ್ಳಿ: ಮೈಸೂರು: 50ಮಿ.ಮೀ
ಮಾಲ್ದೆರೆ: ವಿರಾಜಪೇಟೆ: 45ಮಿ.ಮೀ
ಮುಂಡಾಜೆ: ಬೆಳ್ತಂಗಡಿ: 72ಮಿ.ಮೀ
ಕಲ್ಕುಣಿ: ಮಳವಳ್ಳಿ: 46ಮಿ.ಮೀ
Web Stories