ಬೆಂಗಳೂರು: ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 2016ರಲ್ಲೇ ಈ ಬಗ್ಗೆ ಚಿಂತನೆ ನಡೆಸಿದ್ದ ಮೋದಿ ಸರ್ಕಾರ ಈಗ ಮತ್ತೆ ಅದನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿ ಇಂದು ನಗರದಲ್ಲಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ವಲಯದಲ್ಲಿ ಖಾಸಗೀಕರಣ ತರುವುದು ಬೇಡ ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ನಾನಾ ಸಂಸ್ಥೆಯ ನೌಕರರು ಬೃಹತ್ ಪ್ರತಿಭಟನೆ ಮಾಡಿದರು. ಬಿಇಎಂಎಲ್, ಬಿಎಚ್‍ಇಎಲ್, ಬಿಇಎಲ್, ಹೆಚ್‍ಎಎಲ್, ಐಟಿಐ, ಬಿಎಸ್‍ಎನ್‍ಎಲ್, ವಿಐಎಸ್‍ಎಲ್ ಹಾಗೂ ವಿಐಎಲ್ ಕಂಪನಿಗಳ ಸುಮಾರು 2 ಸಾವಿರಕ್ಕೂ ಅಧಿಕ ನೌಕರರು ಬೆಂಗಳೂರು ಸೇರಿದಂತೆ ಮೈಸೂರು, ತರೀಕೆರೆ, ಕೋಲಾರ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿ ಪ್ರತಿಭಟನೆ ಮಾಡಿದರು.
Advertisement
Advertisement
ಕೇಂದ್ರ ಸರ್ಕಾರದ ಖಾಸಗೀಕರಣದ ನೀತಿಯಿಂದ ಸಾರ್ವಜನಿಕ ವಲಯದ ಮೇಲೆ ನಾನಾ ರೀತಿಯ ಕೆಟ್ಟ ಪರಿಣಾಮ ಬಿರುತ್ತದೆ. ದೇಶದ ಅತ್ಯುನ್ನತ ಸಂಸ್ಥೆಗಳು ಖಾಸಗೀಕರಣವಾದರೆ ಹೇಗೆ? ನಮಗೆ ಖಾಸಗೀಕರಣ ಬೇಡವೇ ಬೇಡ ಎಂದು ಕೇಂದ್ರ ಹಾಗೂ ಮೋದಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.