ಬೆಂಗಳೂರು: ಬಿಜೆಪಿ ಹೈಕಮಾಂಡ್, ಬಿಎಸ್‍ವೈ ನಡುವೆ ಒಪ್ಪಂದದ ಕಾದಾಟ ಜೋರಾಗಿದೆ. ಆಪರೇಷನ್ ಕಮಲದ ವೇಳೆ ನಡೆದ ಒಪ್ಪಂದಕ್ಕೆ ಬದ್ಧವಾಗಿರೋದಕ್ಕೆ ಹೈಕಮಾಂಡ್ ಹೇಳುತ್ತಿದೆ. ಹೈಕಮಾಂಡ್ ಒಪ್ಪಂದದ ಪಟ್ಟು ಯಡಿಯೂರಪ್ಪಗೆ ತಲೆನೋವು ತಂದಿರೋದು ಹೊಸ ವಿಚಾರವಾಗಿದೆ. ಗೆದ್ದ ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಆಗಲ್ಲ. ಅವತ್ತಿನ ಒಪ್ಪಂದದಂತೆ ನಾವು, ನೀವು, ಅವರು ನಡೆದುಕೊಳ್ಳಬೇಕು ಅಂತ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪಗೆ ಸಂದೇಶ ರವಾನಿಸಿದೆ ಎನ್ನಲಾಗಿದೆ.
Advertisement
ರೋಷನ್ ಬೇಗ್ ಹೊರತುಪಡಿಸಿ ಬಿಜೆಪಿ ಬೆಂಬಲಿಸಿದ 17 ಶಾಸಕರಲ್ಲಿ 12 ಶಾಸಕರಿಗೆ ಮಾತ್ರ ಸಚಿವ ಸ್ಥಾನ. ಇದು ಅವತ್ತಿನ ಆಪರೇಷನ್ ಕಮಲದ ವೇಳೆ ನಡೆದಿದ್ದ ಡೀಲ್ ಅನ್ನೋದು ಹೈಕಮಾಂಡ್ ವಾದವಂತೆ. ಈ ಡೀಲ್ ಪ್ರಕಾರ ಈಗಾಗಲೇ ಪಕ್ಷೇತರ ಶಾಸಕ ನಾಗೇಶ್ ಅವರನ್ನ ಮಂತ್ರಿ ಮಾಡಲಾಗಿದೆ. ಹಾಗಾಗಿ ಡೀಲ್ ಪ್ರಕಾರ ಬಾಕಿ ಉಳಿದಿರೋದು 11 ಸಚಿವ ಸ್ಥಾನ ಮಾತ್ರ. 11 ಸಚಿವ ಸ್ಥಾನಗಳಲ್ಲಿ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಅವರಿಗೆ 2 ಸಚಿವ ಸ್ಥಾನ ಮೀಸಲಿಡಬೇಕಾಗುತ್ತೆ. ಹಾಗಾಗಿ ಸದ್ಯ 9 ಸಚಿವ ಸ್ಥಾನ ಮಾತ್ರ ಗೆದ್ದು ಬಂದ ಶಾಸಕರಿಗ ಕೊಡುತ್ತೇವೆ ಅಂತ ಹೈಕಮಾಂಡ್ ದಾಳ ಉರುಳಿಸಿದೆ. ಇನ್ನು ಉಳಿಯುವ 5 ಸಚಿವ ಸ್ಥಾನವನ್ನು ಮೂಲ ಬಿಜೆಪಿ ಶಾಸಕರಿಗೆ ಕೊಡ್ತೀವಿ ಅನ್ನೋದು ಹೈಕಮಾಂಡ್ ಗೇಮ್ ಆಗಿದೆ.
Advertisement
Advertisement
ಅಂದಹಾಗೆ ಅವತ್ತಿನ ಒಪ್ಪಂದ ಮುರಿಯಲು ಸಾಧ್ಯವಿಲ್ಲ ಎಂದಿರುವ ಹೈಕಮಾಂಡ್ ಬಿಜೆಪಿ ಹೈಕಮಾಂಡ್ ಡೀಲ್ ಪ್ರಸ್ತಾಪಕ್ಕೆ ಯಡಿಯೂರಪ್ಪ ಏನ್ ಹೇಳ್ತಾರೆ..? ಅನ್ನೋ ಕುತೂಹಲ ಹೆಚ್ಚಾಗಿದೆ. ದೆಹಲಿ ಭೇಟಿ ವೇಳೆ ಹೈಕಮಾಂಡ್ ಮುಂದೆ ಯಡಿಯೂರಪ್ಪ ಸೂತ್ರದ ರಹಸ್ಯ ಏನು ಅನ್ನೋದ್ರ ಮೇಲೆ ಬಿಜೆಪಿಗೆ ಬಂದ ಹಕ್ಕಿಗಳ ಭವಿಷ್ಯ ನಿಂತಿದೆ. ಮೂರ್ನಾಲ್ಕು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದ್ದು, ಅಲ್ಲಿ ತನಕವೂ ಕಾಯಲು ಗೆದ್ದು ಬಂದ ಶಾಸಕರ ಟೀಂ ತೀರ್ಮಾನಿಸಿದೆ. ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು, ಸೋತವರಿಗೂ ಸಚಿವ ಸ್ಥಾನ ಕೊಡಬೇಕು ಅನ್ನೋದು ವಲಸೆ ಟೀಂ ವಾದ. ಯಾರ ವಾದಕ್ಕೆ ಮನ್ನಣೆ ಸಿಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.