ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದೆ. ಆದರೆ ವಿಪಕ್ಷ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರನ್ನು ಬಿಜೆಪಿ ಶಾಸಕ ಯತ್ನಾಳ್ ಸದನದಲ್ಲಿಯೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಕುಳಿತಿತ್ತು. ಈ ಮೂಲಕ ಯಾವ ಕಾರಣಕ್ಕೂ ಯತ್ನಾಳ್ ಕ್ಷಮೆ ಕೇಳದೇ ಸದನ ನಡೆಯಲು ಬಿಡಲ್ಲ ಎಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು.
Advertisement
ಹೀಗಾಗಿ ಇಂದಿನ ಬಜೆಟ್ ಅಧಿವೇಶನ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸೈದ್ಧಾಂತಿಕ ಹೋರಾಟಕ್ಕೆ ವೇದಿಕೆಯಾಗುವಂತಾಗಿದೆ. ಯತ್ನಾಳ್ ಕ್ಷಮೆ ಕೇಳ್ತಾರಾ ಕಾಂಗ್ರೆಸ್ ಪಟ್ಟು ಬಿಡುತ್ತಾ..? ಗೊತ್ತಿಲ್ಲ. ಆದರೆ ದೊರೆಸ್ವಾಮಿ ಹಾಗೂ ಯತ್ನಾಳ್ ನಡುವಿನ ಜಟಾಪಟಿ ಸದನದಲ್ಲಿ ಪ್ರತಿಧ್ವಿನಿಸುತ್ತಿದೆ.
Advertisement
ವಿಪಕ್ಷ ಕಾಂಗ್ರೆಸ್ ಮಾತ್ರ ಯಾವ ಕಾರಣಕ್ಕೂ ಶಾಸಕ ಯತ್ನಾಳ್ ಕ್ಷಮೆ ಕೇಳದ ಹೊರತು ಸದನದಲ್ಲಿನ ತಮ್ಮ ಪ್ರತಿಭಟನೆ ವಾಪಸ್ ಪಡೆಯಲ್ಲ ಎಂದು ಪಟ್ಟು ಹಿಡಿದಿದೆ. ಯತ್ನಾಳ್ ಕ್ಷಮೆ ಕೇಳದಿದ್ದರೆ ಇಡೀ ಬಜೆಟ್ ಅಧಿವೇಶನವೇ ಪ್ರತಿಭಟನೆಯ ಅಧಿವೇಶನವಾಗಿಸಲು ಕಾಂಗ್ರೆಸ್ ನಿರ್ಧರಿಸಿದೆ.
Advertisement
Advertisement
ಯತ್ನಾಳ್ ಹೇಳಿದ್ದೇನು?
ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದರಾಮಯ್ಯ ಇದ್ರಾ? ಇಲ್ಲಾ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದ್ರಾ ಎಂದು ವಿಜಯಪುರದಲ್ಲಿ ಯತ್ನಾಳ್ ಪ್ರಶ್ನಿಸಿದ್ದರು. ಎಲ್ಲರೂ ಹೋರಾಟ ಮಾಡಿದ್ದಾರೆ. ವಾಜಪೇಯಿಯವರು ಮಾಡಿದ್ದಾರೆ ಆದರೆ ಸಿದ್ಧಾಂತ ಬೇರೆ ಇದ್ದವು. ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್ ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಮಾತಿನ ಚಾಟಿ ಬೀಸಿದ್ದರು.