ಬೆಂಗಳೂರು: ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಅಧ್ಯಕ್ಷ, 2008ರ ಬೆಂಗಳೂರು ಸರಣಿ ಬಾಂಬ್ (2008 Bengaluru Serial Blasts) ಸ್ಪೋಟದ ಆರೋಪಿ ಅಬ್ದುಲ್ ನಾಸೀರ್ ಮದನಿ (Abdul Nasser Madani) ಇಂದು ಸಂಜೆ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಲಿದ್ದಾನೆ.
ಪೊಲೀಸ್ ಬಂದೋಬಸ್ತ್‌ನಲ್ಲಿ ಇಂದು ಸಂಜೆ ಸಂಜೆ 6:15 ರ ವಿಮಾನದಲ್ಲಿ ಪ್ರಯಾಣ ಬೆಳೆಸಿ ರಾತ್ರಿ 7:20ಕ್ಕೆ ಮದನಿ ಕೊಚ್ಚಿನ್ ತಲುಪಲಿದ್ದಾನೆ. ಮದನಿ ಜೊತೆ ಹೆಂಡತಿ ಮತ್ತು ಇತರರು ಪ್ರಯಾಣ ಬೆಳೆಸಲಿದ್ದಾರೆ.
Advertisement
ಕೊಚ್ಚಿನ್‌ಗೆ ತೆರಳಿದ ಬಳಿಕ ಕೊಲ್ಲಂ ಜಿಲ್ಲೆಯ ಅನ್ವರ್ ಸಿರಿ ಸಸ್ತುಂಮಕುಟ ಎಂಬಲ್ಲಿಗೆ ಮದನಿ ತೆರಳಲಿದ್ದಾನೆ. ಮದನಿ ಭದ್ರತೆಗೆ ಓರ್ವ ಆರ್‌ಎಸ್ಐ, ಮೂವರು ಪಿಸಿಗಳು, ಒಬ್ಬ ಚಾಲಕನನ್ನು ನಿಯೋಜನೆ ಮಾಡಲಾಗಿದೆ.
Advertisement
Advertisement
Advertisement
12 ದಿನದ ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಶುಲ್ಕಕ್ಕಾಗಿ 6,76,101 ರೂ. ಹಣವನ್ನು ಮದನಿ ಈಗಾಗಲೇ ಕರ್ನಾಟಕ ಪೊಲೀಸ್‌ಗೆ ಪಾವತಿ ಮಾಡಿದ್ದಾನೆ. ಇಂದು ಸೇರಿ 12 ದಿನ ಮದನಿ ಕೇರಳದಲ್ಲಿ ವಾಸ್ತವ್ಯ ಇದ್ದು ಜುಲೈ 7 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ. ಇದನ್ನೂ ಓದಿ: ವಿದೇಶ ಪ್ರವಾಸದಿಂದ ವಾಪಸ್ಸಾಗ್ತಿದ್ದಂತೆ ಮೋದಿ ಮಹತ್ವದ ಸಭೆ
ತಂದೆಯ ಅನಾರೋಗ್ಯದ ನಿಮಿತ್ತ ಕೇರಳಕ್ಕೆ ತೆರಳಲು ಅನುಮತಿ ನೀಡುವಂತೆ ಮದನಿ ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಮಾಡಿದ್ದ. ಈ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಕೇರಳಕ್ಕೆ ತೆರಳಲು ಏಪ್ರಿಲ್ 17 ರಂದು ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್ 3 ತಿಂಗಳ ಅನುಮತಿ ನೀಡಿದ್ದರೂ ಬೊಮ್ಮಾಯಿ ಸರ್ಕಾರ ಒಂದು ತಿಂಗಳಿಗೆ ಭದ್ರತಾ ವೆಚ್ಚವಾಗಿ 60 ಲಕ್ಷ ರೂ ಪಾವತಿಸಬೇಕೆಂದು ಷರತ್ತು ವಿಧಿಸಿತ್ತು.
ಈ ಶುಲ್ಕ ದುಬಾರಿಯಾಗಿದೆ. ಈ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಕೋರಿ ವಕೀಲ ಕಪಿಲ್ ಸಿಬಲ್ ಸುಪ್ರೀಂನಲ್ಲಿ ಮನವಿ ಮಾಡಿದ್ದರು. ಮದನಿ ತೆರಳುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳುವ ಸಲುವಾಗಿ ಕೇರಳ ಪೊಲೀಸರಿಗೆ (Kerala Police) ಕರ್ನಾಟಕ ಪೊಲೀಸರು ಮಾಹಿತಿ ರವಾನೆ ಮಾಡಿದ್ದಾರೆ.
ಮದನಿ ತೆರಳುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳುವ ಸಲುವಾಗಿ ಕೇರಳ ಪೊಲೀಸರಿಗೆ (Kerala Police) ಕರ್ನಾಟಕ ಪೊಲೀಸರು ಮಾಹಿತಿ ರವಾನೆ ಮಾಡಿದ್ದಾರೆ.