ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಇಂದು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.
ಲಾಲ್ ಬಾಗ್ ಗೇಟ್‍ನ ಕೆಂಗಲ್ ಹನುಮಂತಯ್ಯ ವೃತ್ತದಿಂದ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯವರೆಗೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಕಾಲ್ನಡಿಗೆ ಜಾಥಾ ನಡೆಸಿದರು. ಈ ಕಾಲ್ನಡಿಗೆ ಜಾಥಾದಲ್ಲಿ ಹಿರಿಯ ಸಾಹಿತಿ ಹಂ.ಪ ನಾಗರಾಜಯ್ಯ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಭಾಗಿಯಾಗಿದ್ದರು.
Advertisement
Advertisement
ಜಾಥಾದಲ್ಲಿ ಸಾವಿರಾರು ನೌಕರರು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸರ್ಕಾರಕ್ಕೆ ವರದಿ ನೀಡಿ ಎಂದು ಒತ್ತಾಯಿಸಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂದೀಶ್ ರೆಡ್ಡಿ ಅವರು, ನೌಕರರ ವಿಷಯ ಕುರಿತು ಸಿಎಂ ಗಮನಕ್ಕೆ ತರುತ್ತೇನೆ. ಸಾರಿಗೆ ನೌಕರರ ಬಹಳ ದಿನಗಳ ಬೇಡಿಕೆ ಇದು. ಕಾನೂನಿನ ನಿಯಮಗಳಂತೆ ಶಾಶ್ವತ ಪರಿಹಾರ ಕೊಡಬೇಕು ಎಂದು ಸಿಎಂ ಅವರಿಗೆ ನನ್ನ ಮನವಿಯೂ ಇದೆ ಎಂದು ಹೇಳಿದರು.