ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು (Bengaluru) ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಬೆಸ್ಕಾಂಗೆ (BESCOM) 3.54 ಕೋಟಿ ರೂ. ನಷ್ಟವಾಗಿದೆ.ಇದನ್ನೂ ಓದಿ: ಕರ್ನಾಟಕದ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್
ಕೇವಲ ಮೇ ತಿಂಗಳಲ್ಲೇ 3.54 ಕೋಟಿ ರೂ. ಮೌಲ್ಯದ ಬೆಸ್ಕಾಂ ಉಪಕರಣಗಳು ಹಾಳಾಗಿ ನಷ್ಟವಾಗಿದೆ. 1,581 ವಿದ್ಯುತ್ ಕಂಬಗಳು, 229 ಟ್ರಾನ್ಸ್ಫಾರ್ಮರ್, 1.46 ಕಿ.ಮೀ ಉದ್ದದಷ್ಟು ವಿದ್ಯುತ್ ತಂತಿ, 46 ಡಬಲ್ ಪೋಲ್ ಸ್ಟ್ರಕ್ಚರ್‌ಗಳು ಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದ ಹಾಳಾಗಿವೆ.
ಇವುಗಳನ್ನು ಸರಿಪಡಿಸಲು 55 ಲಕ್ಷ ರೂ. ಕಾರ್ಮಿಕ ವೆಚ್ಚ ಸೇರಿ ಮಳೆ ಅವಾಂತರ ಸರಿಮಾಡಲು 4.09 ಕೋಟಿ ರೂ. ಬೆಸ್ಕಾಂಗೆ ಹೊರೆಯಾಗಿದೆ.ಇದನ್ನೂ ಓದಿ: ಸನ್ ರೈಸರ್ಸ್ ಆರ್ಭಟಕ್ಕೆ ಆರ್‌ಸಿಬಿ ಬರ್ನ್ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು