– ರಾಮನವಮಿಯಂದು ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಬೀಳುತ್ತೆ ಸೂರ್ಯನ ಕಿರಣ!
ಅಯೋಧ್ಯೆ/ರಾಮಮಂದಿರ: ರಾಮನವಮಿ (Ram Navami) ದಿನದಂದು ಅಯೋಧ್ಯೆ ರಾಮಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿರುವ ರಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳುತ್ತದೆ. ಅದಕ್ಕೆ ಸಹಕಾರಿಯಾದ ಆಪ್ಟಿಕಲ್ ಯಂತ್ರವನ್ನು (Surya Tilak Machine) ಬೆಂಗಳೂರು ಮೂಲದ ಕಂಪನಿಯೊಂದು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿರುವುದು ವಿಶೇಷ.
Advertisement
ಎರಡು ಸಾರ್ವಜನಿಕ ಸಂಸ್ಥೆಗಳು ಮತ್ತು ಜೈನ ಕುಟುಂಬ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಕಂಪನಿಯು ಅಯೋಧ್ಯೆ ರಾಮಮಂದಿರಕ್ಕೆ ‘ಸೂರ್ಯ ತಿಲಕ ಯಂತ್ರ’ವನ್ನು ಕೊಡುಗೆಯಾಗಿ ನೀಡಿದೆ. ಇದನ್ನೂ ಓದಿ: ಗೆಲುವಿಗಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ ಹೆಚ್‌ಡಿಕೆ – ಒಕ್ಕಲಿಗ, ಲಿಂಗಾಯತ ವೋಟ್‌ಬ್ಯಾಂಕ್ ಕಬ್ಜಕ್ಕೆ ಕ್ಯಾಂಪೇನ್
Advertisement
Advertisement
84 ಲಕ್ಷ ರೂ. ಮೌಲ್ಯದ ಈ ಯಂತ್ರವನ್ನು ಜಿಗಣಿ ಲಿಂಕ್ ರಸ್ತೆಯಲ್ಲಿರುವ ಆಪ್ಟಿಕ್ಸ್ & ಅಲೈಡ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (OPTICA) ಕೊಡುಗೆಯಾಗಿ ನೀಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI) ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ.
Advertisement
ಕಂಪನಿಯು ಈ ಆಪ್ಟಿಕಲ್ ವ್ಯವಸ್ಥೆಯನ್ನು ಸದ್ಭಾವನೆಯ ಸೂಚಕವಾಗಿ ಅಭಿವೃದ್ಧಿಪಡಿಸಿದೆ. ಈ ಯಂತ್ರದ ವಿನ್ಯಾಸಕ್ಕೆ ನಾಲ್ಕು ತಿಂಗಳ ಸಮಯ ಬೇಕಾಯಿತು. ಪ್ರತಿ ರಾಮನವಮಿಯಂದು 3-4 ನಿಮಿಷಗಳ ಕಾಲ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬೀಳಲು ಇದು ಸಹಕಾರಿಯಾಗಲಿದೆ ಎಂದು OPTICA ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕೊಟಾರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರಾ ಕರಡಿ ಸಂಗಣ್ಣ?- ಲಕ್ಷ್ಮಣ ಸವದಿ ಭೇಟಿ ಬೆನ್ನಲ್ಲೇ ಕುತೂಹಲ
ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ಯಂತ್ರ ರೂಪಿಸಲಾಗಿದೆ. ಇದು ಪೆರಿಸ್ಕೋಪ್‌ನಂತೆ ಕಾರ್ಯನಿರ್ವಹಿಸುತ್ತದೆ. ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿನ ಕನ್ನಡಿಯು ರಾಮನವಮಿಯಂದು ನಿರ್ದಿಷ್ಟ ಕೋನದಲ್ಲಿ ಸೂರ್ಯನ ಬೆಳಕನ್ನು ಸೆರೆಹಿಡಿಯುತ್ತದೆ. ಸೆರೆ ಹಿಡಿದ ಬೆಳಕು ವಿಗ್ರಹದ ಹಣೆ ಮೇಲೆ ನಿಖರವಾಗಿ ಮೂಡುತ್ತದೆ ಎಂದು ಹೇಳಿದ್ದಾರೆ.