ಬೆಂಗಳೂರು: ಕೇರಳದಲ್ಲಿ (Kerala) ಭಾರೀ ಸದ್ದು ಮಾಡಿ, ಈ ಹಿಂದೆ ನಗರಕ್ಕೂ ಕಾಲಿಟ್ಟಿದ್ದ ವೈಫ್ ಸ್ವಾಪ್ (Wife Swaping) ಎಂಬ ಕೆಟ್ಟ ಸಂಸ್ಕೃತಿ ಬೆಂಗಳೂರಲ್ಲಿ (Bengaluru) ಮತ್ತೆ ಹುಟ್ಟಿಕೊಂಡಿದೆ. ಈಗ ಮತ್ತೆ ವೈಫ್ ಸ್ವಾಪ್ ಕುರಿತಾದ ಆರೋಪವೊಂದು ಕೇಳಿ ಬಂದಿದೆ.
ಬಸವನಗುಡಿಯ ಪೂರ್ಣಚಂದ್ರ ಎಂಬಾತ ವೈಫ್ ಸ್ವಾಪ್ ಮಾಡಲು ತನ್ನ ಪತ್ನಿಯನ್ನು (Wife ) ಒತ್ತಾಯಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪತ್ನಿ ಒಪ್ಪದಿದ್ದಕ್ಕೆ ಆತ ಆಕೆಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಈ ಸಂಬಂಧ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ನಿರುದ್ಯೋಗ ಯುವಕ-ಯುವತಿಯರಿಗೆ ಗುಡ್‌ನ್ಯೂಸ್ – ಡಿ.21ರಿಂದ `ಯುವ ನಿಧಿ’ಗೆ ನೋಂದಣಿ
ಏನಿದು ವೈಫ್ ಸ್ವಾಪ್?
ತನ್ನ ಹೆಂಡತಿಯನ್ನು ಸ್ನೇಹಿತರ ಜೊತೆಯೂ ಹೆಂಡತಿಯಂತೆ ಇರುವಂತೆ ಮಾಡುವುದು ಅಥವಾ ಸ್ನೇಹಿತರ ಹೆಂಡತಿಗೆ ಇವನು ಗಂಡನಂತೆ ಇರುವುದೇ ವೈಫ್ ಸ್ವಾಪ್ ಸಂಸ್ಕøತಿ. ಈ ಪದ್ಧತಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿದ್ದು, ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ದೊಡ್ಡ ಸದ್ದು ಮಾಡಿತ್ತು. ಅಲ್ಲದೇ ಈ ಹಿಂದೆ ಬೆಂಗಳೂರಿನಲ್ಲೂ ಕೆಲವು ಪ್ರಕಣಗಳು ದಾಖಲಾಗಿದ್ದವು. ಈಗ ಅದೇ ಮಾದರಿಯಲ್ಲಿ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ