ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ 5ನೇ ಗ್ಯಾರಂಟಿ (Congress Guarantee) ಯುವ ನಿಧಿ ಯೋಜನೆ (Yuva Nidhi Scheme) ಜಾರಿಗೆ ದಿನಗಣನೆ ಆರಂಭವಾಗಿದೆ.
ಡಿಸೆಂಬರ್ 21 ರಿಂದ ಯುವ ನಿಧಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಸಂಕ್ರಾಂತಿ ವೇಳೆಗೆ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಇದನ್ನೂ ಓದಿ: ಶಾಸಕರ ಆದಾಯ ಕೋಟಿ ಕೋಟಿ ಹೆಚ್ಚಾದ್ರೂ ಕನಕಪುರ ಅಭಿವೃದ್ಧಿಯಾಗಿಲ್ಲ: ಪರೋಕ್ಷವಾಗಿ ಡಿಕೆಶಿ ತಿವಿದ ಯತ್ನಾಳ್
Advertisement
Advertisement
ಈ ಬಗ್ಗೆ ಮಾತನಾಡಿರುವ ಡಿ.ಕೆ ಶಿವಕುಮಾರ್ (DK Shivakumar), ಯುವ ನಿಧಿ ಜಾರಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೌಶಲ್ಯ ಅಭಿವೃದ್ಧಿ ಸಚಿವರು ಅದಕ್ಕೆ ಬೇಕಾದ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ, ಭಯೋತ್ಪಾದಕರ ಕೇಂದ್ರ ಆಗ್ತಿದೆ ರಾಜ್ಯ: ಈಶ್ವರಪ್ಪ ಕಿಡಿ
Advertisement
ಈ ಬೆನ್ನಲ್ಲೇ ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಶರಣ ಪ್ರಕಾಶ್ ಪಾಟೀಲ್, ಜನವರಿಯಲ್ಲಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಯುವಜನತೆಗೆ ಬೆನ್ನೆಲುಬಾಗಲಿರುವ ಈ ಯೋಜನೆಯಿಂದ ಸುಮಾರು 5 ಲಕ್ಷ ಪದವೀಧರರ ಖಾತೆಗೆ ನೇರವಾಗಿ ಹಣ ತಲುಪಲಿದೆ ಅಂದಿದ್ದಾರೆ. ಪದವೀಧರರು ಪದವಿ ಪೂರೈಸಿ 6 ತಿಂಗಳು ನಿರುದ್ಯೋಗಿಗಳಾಗಿದ್ದರೆ ಮಾಸಿಕ 3,000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ಸಿಗಲಿದೆ ಎಂದು ನುಡಿದರು.
Advertisement
2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಅದರಲ್ಲಿ ಯುವ ನಿಧಿ ಯೋಜನೆ ಅತ್ಯಂತ ಪ್ರಮುಖವಾದುದಾಗಿದೆ. ಯುವ ನಿಧಿ ಯೋಜನೆಯನ್ನು 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತದೆ. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. 24 ತಿಂಗಳ ಒಳಗೆ ಉದ್ಯೋಗ ಸಿಕ್ಕರೆ ಈ ಯೋಜನೆ ರದ್ದಾಗುತ್ತದೆ. ಯುವಕ, ಯುವತಿ ಹಾಗೂ ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯ ಆಗಲಿದೆ.