ಬೆಂಗಳೂರು: ಕಾವೇರಿಗಾಗಿ (Cauvery) ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರಿಗೆ ಬಂದ್‌ಗೆ (Bengalruu Bandh) ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ಸುಗಳು (BMTC Bus) ಎಂದಿನಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರ ಜೊತೆಗೆ ರಾಜಧಾನಿಯಿಂದ ಉಳಿದ ಜಿಲ್ಲೆಗಳಿಗೆ ತೆರಳುವ ಎಲ್ಲಾ ಸರ್ಕಾರಿ ಬಸ್ಸುಗಳು ಸಹ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ತಮಿಳುನಾಡು ಕಡೆಗೆ ಸಂಚರಿಸುವ ಬಸ್ಸುಗಳ ಸಂಖ್ಯೆ ವಿರಳವಾಗಿದೆ.
Advertisement
Advertisement
ಬಿಎಂಟಿಸಿ ಬಸ್ಸುಗಳು ಸಂಚಾರ ಇರುವುದರಿಂದ ರಿಕ್ಷಾಗಳು ಸಂಚರಿಸುತ್ತಿವೆ. ಬೆಳ್ಳಂಬಳಗ್ಗೆ ಎಂದಿನಿಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬೆಂಗಳೂರು ಬಂದ್‌ಗೆ ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸದ ಕಾರಣ ಬಂದ್ ಬಿಸಿ ಇನ್ನೂ ತಟ್ಟಿಲ್ಲ. ಇದನ್ನೂ ಓದಿ: ನಟ-ನಟಿಯರನ್ನ ಆರತಿ ಎತ್ತಿ ಕಾವೇರಿ ಹೋರಾಟಕ್ಕೆ ಕರೆಯಬೇಕಾ? – ಶಾಸಕ ಯತ್ನಾಳ್ ವಾಗ್ದಾಳಿ
Advertisement
ಏನಿರುತ್ತೆ?
ಹೋಟೆಲ್, ಮದ್ಯದಂಗಡಿ, ಓಲಾ, ಊಬರ್, ನಮ್ಮ ಮೆಟ್ರೋ, ರೈಲು, ಸರ್ಕಾರಿ ಕಚೇರಿಗಳು, ಬ್ಯಾಂಕ್, ಪೋಸ್ಟ್ ಆಫೀಸ್, ಆಸ್ಪತ್ರೆ, ಮೆಡಿಕಲ್ ಸ್ಟೋರ್, ದಿನಸಿ, ಹಾಲು, ಹಣ್ಣು, ತರಕಾರಿ ಅಂಗಡಿ, ಬೀದಿಬದಿ ವ್ಯಾಪಾರ.
Advertisement
Web Stories