ಬೆಂಗಳೂರು: ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ತಂದು ಕೊಟ್ಟ ಆಟೋ ಡ್ರೈವರ್ (Auto Driver) ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನ (Bengaluru) ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ರ‍್ಯಾಪಿಡೊ ಮೂಲಕ ಆಟೋ ಬುಕ್ ಮಾಡಿದ್ದರು. ಪ್ರಯಾಣಿಸಿದ ನಂತರ ಪರ್ಸ್ ಹಾಗೂ ಐಫೋನ್ ಮರೆತು ಆಟೋ ಇಳಿದು ಹೋಗಿದ್ದರು. ಇದಾದ ಕೆಲ ಹೊತ್ತಿನ ನಂತರ ಪರ್ಸ್ ಮತ್ತು ಮೊಬೈಲ್ ಮರೆತಿರೋದು ಗೊತ್ತಾಗಿ ಠಾಣೆಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್‌ನ್ಯೂಸ್ – ಒಂದೇ ದಿನ ದರದಲ್ಲಿ ಭಾರೀ ಇಳಿಕೆ
ಕೊತ್ತನೂರು ಠಾಣೆ ಪೊಲೀಸರು ಮಹಿಳೆ ನಂಬರ್‌ಗೆ ಕಾಲ್ ಮಾಡಿದಾಗ ಆಟೋ ಡ್ರೈವರ್ ಪ್ರತಿಕ್ರಿಯಿಸಿ, ಮೊಬೈಲ್ ಮತ್ತು ಪರ್ಸ್ ಅನ್ನು ಯುವತಿಗೆ ಮರಳಿಸಿದ್ದಾರೆ. ಆಟೋ ಡ್ರೈವರ್ ಕೆಲಸಕ್ಕೆ ಮಹಿಳೆ ಹಾಗೂ ಪೊಲೀಸ್ ಸಿಬ್ಬಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

