ಬೆಂಗಳೂರು: ಪುಟ್ಟ ಆಪೆ ಗಾಡಿಯಲ್ಲಿ 67 ವರ್ಷದ ಆನೆಯನ್ನು ತಂಜಾವೂರಿನಿಂದ ಕೋಲಾರದ ಪ್ರಾಣಿ ಪುನರುಜ್ಜೀವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಆನೆಯನ್ನು ಟ್ರಕ್ ಅಥವಾ ಲಾರಿಗಳಲ್ಲಿ ಸಾಗಿಸುತ್ತಾರೆ. ಆದರೆ ಟೋವಿಂಗ್ ವಾಹನದಲ್ಲಿ ಪುಟ್ಟ ಆಪೆ ಗಾಡಿ ಹತ್ತಿಸಿ, ಅದರ ಮೇಲೆ ಆನೆಯನ್ನು ನಿಲ್ಲಿಸಿ ಸಾಗಿಸಲಾಗಿದೆ. ಜೊತೆಗೆ ಆನೆಯ ನಾಲ್ಕು ಕಾಲಿಗೂ ಸರಪಳಿ ಕಟ್ಟಿ, ನಿಲ್ಲಲು ಸಾಧ್ಯವಾಗದ ತೆರದ ವಾಹನದಲ್ಲಿ ಸಾಗಿಸಿದ್ದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರ ಕೋಪಕ್ಕೆ ಕಾರಣವಾಗಿದೆ.
Advertisement
ಆನೆಯನ್ನು ಅಷ್ಟು ದೂರ ಸಾಗಿಸುವುದೇ ತಪ್ಪು. ಅದರಲ್ಲೂ ಅಜಾಗೃತ ಕ್ರಮದಲ್ಲಿ ಆನೆಯನ್ನು ಸಾಗಿಸಲಾಗುತ್ತಿದೆ. ಇದನ್ನು ಗಮನಿಸಿದ ಪ್ರಾಣಿ ಪ್ರಿಯ ರಾಜೇಶ್ ಎಂಬವರು, ಆನೆ ಸಾಗಿಸುತ್ತಿದ್ದ ವಾಹನದ ಫೋಟೋ ತೆಗೆದು ದೂರು ದಾಖಲಿಸಲು ನಿರ್ಧಾರಿದ್ದಾರೆ. ಅಷ್ಟೇ ಅಲ್ಲ ಇದು ಅಮಾನವೀಯ ವರ್ತನೆ ಅಂತ ಕಿಡಿಕಾರಿದ್ದಾರೆ.