ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ

Public TV
2 Min Read
ramya 6

ಬೆಂಗಳೂರು: ಸ್ಯಾಂಡಲ್‍ವುಡ್ ಬ್ಯೂಟಿಕ್ವೀನ್ ರಮ್ಯ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದು, ಅವರ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ.

ಒಂದು ಕಾಲದಲ್ಲಿ ಚಂದನವದ ಬುಹುಬೇಡಿಕೆಯ ನಟಿಯಾಗಿ ಮರೆದಿದ್ದ ರಮ್ಯಾ, ಸದ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಖತ್ ಸಕ್ರಿಯವಾಗಿ ಇದ್ದ ರಮ್ಯಾ ಅವರು, ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆದರೆ ಈಗ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ್ಯಕ್ಟಿವ್ ಆಗಿ ಇಟ್ಟುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ramya tw

ಈ ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದ ರಮ್ಯಾ ಅವರು, ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ತಮ್ಮ ಟ್ವಿಟ್ಟರ್ ಖಾತೆಯನ್ನು ಡೀ ಆಕ್ಟಿವೇಟ್ ಮಾಡಿದ್ದರು. ಆದಾದ ನಂತರ ರಮ್ಯ ಅವರು ಎಲ್ಲಿ ಇದ್ದಾರೆ. ಏನ್ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿರಲ್ಲಿ. ಆದರೆ ಈಗ ದೇಶವೇ ಕೊರೊನಾ ಸೋಂಕಿನಿಂದ ಭೀತಿಯಲ್ಲಿ ಸಮಯದಲ್ಲಿ ರಮ್ಯ ಅವರು ತಮ್ಮ ಟ್ವಿಟ್ಟರ್ ಖಾತೆಯಗೆ ವಾಪಸ್ ಬಂದಿದ್ದಾರೆ.

RAMYA 2

ಮತ್ತೆ ತಮ್ಮ ಟ್ವಿಟ್ಟರ್ ಖಾತೆಗೆ ಮರಳಿರುವ ಅವರು ಯಾವುದೇ ಹೊಸ ಟ್ವೀಟ್ ಮಾಡಿಲ್ಲ. ಆದರೆ ಅವರ ಅಕೌಂಟ್ ಆ್ಯಕ್ಟಿವ್ ಆಗಿದೆ. ರಮ್ಯಾ ಅವರು ಕೊನೆಯದಾಗಿ 2019ರ ಜೂನ್ 1ರಂದು ಕೊನೆಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ಕಳೆದು ಹೋದ ಶ್ವಾನದ ಒಂದು ಫೋಟೋ ಹಾಕಿ ಈ ನಾಯಿ ಕಳೆದು ಹೋಗಿದೆ ಪ್ಲೀಸ್ ವಿಟೋವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.

ramya birthday 3

ಈ ಹಿಂದೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರನ್ನು ಲೋಕಸಭೆ ಚುನಾವಣೆ ಬಳಿಕ ಬದಲಾಯಿಸಲಾಗಿತ್ತು. ಈ ಕಾರಣದಿಂದ ಬೇಸರಗೊಂಡು ಸಾಮಾಜಿಕ ಜಾಲತಾಣದಿಂದ ದೂರು ಉಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳಿರುವುದು ತಮ್ಮ ನೆಚ್ಚಿನ ನಟಿ ಕಾಣದೇ ಬೇಜಾರಗಿದ್ದ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ramya

ಸಿನಿಮಾದ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ಕೊನೆಯದಾಗಿ 2016ರಲ್ಲಿ ತೆರೆಕಂಡ ನಾಗರಹಾವು ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಬಳಿಕ ಫುಲ್ ಟೈಮ್ ರಾಜಕೀಯಕ್ಕೆ ಬಂದ ಅವರು ಮತ್ತೆ ಯಾವುದೇ ಸಿನಿಮಾ ಮಾಡಿಲ್ಲ. ಆದರೆ ಇಷ್ಟು ದಿನ ಮರೆಯಾಗಿದ್ದ ರಮ್ಯ ಮತ್ತೆ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಕ್ಯಾಮೆರಾ ಮುಂದೆ ಬರುತ್ತಾರಾ ನಟನೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

Share This Article
Leave a Comment

Leave a Reply

Your email address will not be published. Required fields are marked *