ಬೆಂಗಳೂರು: ಓಮಿಕ್ರಾನ್ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಕಳೆದ ನಾಲ್ಕು ದಿನದಲ್ಲೇ ಬಿಬಿಎಂಪಿಗೆ ದಂಡದ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿದೆ.
ಓಮಿಕ್ರಾನ್ ತಡೆಗೆ ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್ಸ್ ಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಹಾಕದೆ ಇರುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ 7 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ.
Advertisement
Advertisement
ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಂದ 6,31,500 ರೂ. ಹಾಗೂ ಸಾಮಾಜಿಕ ಅಂತರ ಇಲ್ಲದೆ ಇರುವುದರಿಂದ 1,17,750 ರೂ. ದಂಡ ವಸೂಲಿ ಆಗಿದೆ. ಕಳೆದ ನಾಲ್ಕು ದಿನದಲ್ಲಿ 2960 ಪ್ರಕರಣಗಳಲ್ಲಿ 7,49,250 ರೂ. ದಂಡ ವಸೂಲಿ ಮಾಡಿದ್ದಾರೆ. ಇದೂವರೆಗೂ 14,82,75,211 ರೂ. ದಂಡವನ್ನು ಪಾಲಿಕೆ ವಸೂಲಿ ಮಾಡಿದೆ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್
Advertisement
Advertisement
ಇಂದಿನಿಂದ ಮಾರ್ಷಲ್ಸ್ ಗಳು ಮತ್ತಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಾಸ್ಕ್ ಹಾಕದೆ ರೋಡಿಗೆ ಇಳಿದರೆ ದಂಡ ಕಟ್ಟಬೇಕು. ಮಾರ್ಕೆಟ್, ಮಾಲ್, ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್ಸ್ ಕಾರ್ಯಾಚರಣೆ ನಡೆಸಲಿದ್ದಾರೆ. ಓಮಿಕ್ರಾನ್ ವೈರಸ್ ತಡೆಗೆ ಬಿಬಿಎಂಪಿ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಮಾಸ್ಕ್ ಹಾಕದವರು ಯಾರೇ ಇದ್ದರೂ ಮುಲಾಜಿಲ್ಲದೇ ದಂಡ ವಸೂಲಿ ಮಾಡುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಒಮಿಕ್ರಾನ್ ಕೇಸ್ 21ಕ್ಕೆ ಏರಿಕೆ – ಒಂದೇ ದಿನ 17 ಹೊಸ ಪ್ರಕರಣ ಪತ್ತೆ