ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ವರ್ಸಸ್ ಪೊಲೀಸರ ಸಂಘರ್ಷ ಜೋರಾಗಿದೆ. ಪೊಲೀಸ್ ಲಾಠಿಚಾರ್ಜ್ ವೇಳೆ ತಳ್ಳಾಟ ನೂಕಾಟ ನಡೆದಿದ್ದು, ಈ ವೇಳೆ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮಜೂಂದಾರ್ ಗೆ ಗಾಯಗೊಂಡಿದ್ದಾರೆ.
ನಾರ್ತ್ 24 ಪರಗಣ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ವೇಳೆ ಸುಕಾಂತ್ ಅವರು ಕಾರಿನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಲ್ಕತ್ತಾದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಟಿಎಂಸಿ ನಾಯಕನಿಂದ ಕಾರ್ಯಕರ್ತೆಗೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿತ್ತು.
- Advertisement
ಸಿಎಂ ಮಮತಾ ಬ್ಯಾನರ್ಜಿ ಮತ್ತು ಪೊಲೀಸರು ಭಯಭೀತರಾಗಿದ್ದಾರೆ ಮತ್ತು ಸಂದೇಶಖಾಲಿ ಘಟನೆ ಬೆಳಕಿಗೆ ಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಕಾಂತ್ ಈ ಹಿಂದೆ ಹೇಳಿದ್ದರು. ಇದೇ ಕಾರಣಕ್ಕೆ ಆ ಪ್ರದೇಶದಲ್ಲಿ ಮತ್ತೆ ಮತ್ತೆ ಸೆಕ್ಷನ್ 144 ಹೇರಲಾಗುತ್ತಿದೆ. ಯಾವುದೇ ವಿರೋಧ ಪಕ್ಷದ ನಾಯಕರಾಗಲೀ, ಸಾಮಾಜಿಕ ಸಂಘಟನೆಯಾಗಲೀ ಅಲ್ಲಿಗೆ ಹೋಗದ ರೀತಿಯಲ್ಲಿ ಹೇರಲಾಗಿತ್ತು. ಇದನ್ನೂ ಓದಿ: Rajyasabha Polls: ಗುಜರಾತ್‌ನಿಂದ ಜೆ.ಪಿ ನಡ್ಡಾ, ಮಹಾರಾಷ್ಟ್ರದಿಂದ ಅಶೋಕ್ ಚವಾಣ್‌ಗೆ ಟಿಕೆಟ್