ಒಂದೇ ಜಿಲ್ಲೆಯಲ್ಲಿ 112 ಸಜೀವ ಬಾಂಬ್ ಪತ್ತೆ, 399 ಜನರ ಬಂಧನ

Public TV
1 Min Read
bomb

ಕೊಲ್ಕತಾ: ಪಶ್ಚಿಮ ಬಂಗಾಳದ ಒಂದೇ ಜಿಲ್ಲೆಯಲ್ಲಿ ಭಾರೀ ಪ್ರಮಾಣ ಮದ್ದುಗುಂಡುಗಳು ಪತ್ತೆಯಾಗುವ ಮೂಲಕ ದೇಶವನ್ನೇ ತಲ್ಲಣಗೊಳಿಸಿದೆ.

ಪಶ್ಚಿಮ ಬಂಗಾಳದ ಬಿರ್ಭಮ್‍ನಲ್ಲಿ ಶಸ್ತ್ರಾಸ್ತ್ರ ಮತ್ತು ಹಿಂಸಾಚಾರದ ಕುರಿತ ಸುಳಿವಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿ ದಾಳಿ ನಡೆಸಿ ಒಟ್ಟು 112 ಸಜೀವ ಬಾಂಬ್‍ಗಳು, 6 ದೇಸಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ 399 ಜನರನ್ನು ಪೊಲೀಸರು ಬಂಧಿಸಿದ್ದಾರೆ.

bomb 3

ಬಿರ್ಭಮ್ ಜಿಲ್ಲೆಯಾದ್ಯಂತ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದು, ನನೂರ್(32), ಲಬ್‍ಪೂರ್(40), ಪನ್ರೂಯಿ(20), ಸದಾಯಿಪುರ್(9), ಕಂಕರ್ತಲ(9), ರಾಮ್‍ಪುರಾತ್(2) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 112 ಜೀವಂತ ಕಚ್ಚಾ ಹಾಗೂ ಸಾಕ್ಕೆಟ್ ಬಾಂಬ್‍ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

Bomb 5

ಒಟ್ಟು 399 ಆರೋಪಿಗಳನ್ನು ಬಂಧಿಸಲಾಗಿದ್ದು, ನಿರ್ಧಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 65, ಮುನ್ನೆಚ್ಚರಿಕಾ ಕ್ರಮವಾಗಿ 228 ಮತ್ತು ಬಾಕಿ ಇರುವ ಪ್ರಕರಣಗಳಲ್ಲಿ 106 ಜನರನ್ನು ಬಂಧಿಸಲಾಗಿದೆ ಎಂದು ಶ್ಯಾಮ್ ಸಿಂಗ್ ವಿವರಿಸಿದ್ದಾರೆ.

bomb 2

ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಬಿರ್ಭಮ್‍ನ ಪಾಂಚಾಯತ್ ಉಪ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಸ್ಫೋಟ ಸಂಭವಿಸಿತ್ತು. ಹೀಗಾಗಿ ಪರಿಶೀಲನೆ ಕಾರ್ಯಾಚರಣೆ ನಡೆಸಿದೆವು. ಈ ವೇಳೆ ಇಷ್ಟೊಂದು ಬಾಂಬ್‍ಗಳು ಪತ್ತೆಯಾಗಿವೆ ಎಂದು ಸಿಂಗ್ ತಿಳಿಸಿದ್ದಾರೆ.

bomb 4

ಸದೈಪುರ, ರಾಮ್‍ಪುರ್ ಘಾಟ್, ದುಬ್ರಾಜ್‍ಪುರ್, ನಲ್ಹತಿ, ಮೊಹಮ್ಮದ್ ಬಜಾರ್ ಮತ್ತು ಲಬ್‍ಪುರ್ ಪ್ರದೇಶಗಳಲ್ಲಿ ತಲಾ ಒಂದರಂತೆ ಒಟ್ಟು 6 ದೇಸಿ ನಿರ್ಮಿತ ಬಂದೂಕು ಹಾಗೂ ಮದ್ದು ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *