ಶನಿವಾರ-ಭಾನುವಾರ ಬಂದರೆ ಅನೇಕರು ಚಿಕನ್ ಮಾಡುತ್ತಾರೆ. ಆದರೆ ರಜೆ ದಿನ ಬಂದಾಗೆಲ್ಲಾ ನಾನ್‍ವೆಜ್ ಮಾಡಲು ಸಾಧ್ಯವಿಲ್ಲ. ಆರೋಗ್ಯ ಕಾಪಾಡಿಕೊಳ್ಳಲು ತರಕಾರಿಗಳ ಸೇವನೆ ಕೂಡ ಮುಖ್ಯವಾಗುತ್ತದೆ. ಮಕ್ಕಳಂತೂ ತರಕಾರಿಯನ್ನು ತಿನ್ನಲ್ಲ. ಆದರೆ ಬೆಂಡೇಕಾಯಿ ಇದು ಡಯಾಬಿಟಿಸ್ ನಿಯಂತ್ರಣಕ್ಕೆ ತುಂಬಾ ಉಪಯುಕ್ತ. ಆದರೆ ಕೆಲವರಿಗೆ ಬೆಂಡೇಕಾಯಿ ಸಾಂಬಾರ್ ಎಂದರೆ ಇಷ್ಟನೇ ಇರುವುದಿಲ್ಲ. ಹೀಗಾಗಿ ರುಚಿ ಜೊತೆ ಹುಳಿಯಾಗಿ ಬೆಂಡೇಕಾಯಿ ಗೊಜ್ಜು ಹುಳಿ ಮಾಡುವ ಸುಲಭ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು
1. ಹೆಚ್ಚಿದ ಬೆಂಡೇಕಾಯಿ – 2 ಕಪ್
2. ಕೊಬ್ಬರಿ ತುರಿ -1 ಕಪ್
3. ಒಣಮೆಣಸಿನಕಾಯಿ -6 ರಿಂದ 7
4. ಕೊತ್ತಂಬರಿ – 2 ಚಮಚ
5. ಕಡಲೇಬೇಳೆ – 1 ಚಮಚ
6. ಉದ್ದಿನಬೇಳೆ -1 ಚಮಚ
7. ಕರಿಬೇವಿನಸೊಪ್ಪು – 6 ರಿಂದ 7 ಎಸಳು
8. ಬೆಲ್ಲ -ಕಾಲು ಕಪ್
9. ಹುಣಸೇಹಣ್ಣಿನ ರಸ – ಕಾಲು ಕಪ್
10. ಎಣ್ಣೆ – 3 ಚಮಚ
11. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಮೊದಲು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕೊತ್ತಂಬರಿ ಬೀಜ, ಮೆಣಸಿನಕಾಯಿ, ಕಡಲೇಬೇಳೆ, ಉದ್ದಿನಬೇಳೆ, ಕರಿಬೇವಿನಸೊಪ್ಪು ಹಾಕಿ ಹುರಿದುಕೊಳ್ಳಿ.
* ಬಳಿಕ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಕೊಬ್ಬರಿ ತುರಿ ಸೇರಿಸಿ ರುಬ್ಬಿಕೊಳ್ಳಿ.
* ಮತ್ತೊಂದೆಡೆ ಬಾಣಲೆಗೆ ಎಣ್ಣೆ ಹಾಕಿ ಹೆಚ್ಚಿದ ಬೆಂಡೇಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಹುರಿದುಕೊಳ್ಳಿ.
* ಅದಕ್ಕೆ ಸ್ವಲ್ಪ ಬಿಸಿನೀರನ್ನು ಸೇರಿಸಿ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ಬಳಿಕ ಬೆಂಡೇಕಾಯಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
* ಕೊನೆಗೆ ಹುಣಸೇಹಣ್ಣಿನ ರಸವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಿದರೆ ಬೆಂಡೇಕಾಯಿ ಗೊಜ್ಜುಹುಳಿ ಸವಿಯಲು ಸಿದ್ಧ.
Advertisement