ಬೆಂಗಳೂರು: ಬಿಡಿಎನಲ್ಲಿ ನಿವೇಶನಗಳ ಹಂಚಿಕೆ ಮತ್ತು ಮಾರಾಟದಲ್ಲಿ ಬೋಗಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆ, ಖಚಿತ ಅಳತೆ (ಕರೆಕ್ಟ್ ಡೈಮೆನ್ಶನ್) ವರದಿಯನ್ನು ಇ- ಆಫೀಸ್ ಮೂಲಕವೇ ವಿತರಿಸಲು ಬಿಡಿಎ ಮುಂದಾಗಿದೆ.
ಬಿಡಿಎನಲ್ಲಿ ಆಡಳಿತ ಪಾರದರ್ಶಕವಾಗಿರಬೇಕು ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ಮೇರೆಗೆ ಈ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಡಿಎ ಭೂಸ್ವಾಧೀನಪಡಿಸಿಕೊಂಡು ರಚಿಸಿರುವ ಬಡಾವಣೆಗಳಲ್ಲಿ ನಿವೇಶನಗಳನ್ನು ರಚಿಸಿ, ಅರ್ಹರಿಂದ ಕಾಲ ಕಾಲಕ್ಕೆ ಅರ್ಜಿ ಆಹ್ವಾನಿಸಿ ವಸತಿ ನಿವೇಶನಗಳನ್ನು ಕೊಡುವ ಉದ್ದೇಶದಿಂದ ಇ-ಆಫೀಸ್ ರಚಿಸಲಾಗಿದೆ.
Advertisement
Advertisement
ಇದುವರೆಗೆ ಬಿಡಿಎ ಕಡತಗಳನ್ನು ಲಿಖಿತ ರೂಪದಲ್ಲಿ ನಿವೇಶನಗಳ ಖಚಿತ ಅಳತೆ ವರದಿ, ಆಯವ್ಯಯ ಅಂದಾಜು ವೆಚ್ಚಗಳ ಮಾಹಿತಿಯನ್ನು ಮಂಡಿಸಲಾಗುತ್ತಿತ್ತು. ಆದರೆ ಇದಕ್ಕೆ ಡಿಜಿಟಲ್ ಸ್ಪರ್ಶ ನೀಡಿದ್ದು, ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲಿಕರಣ ಮಾಡಲಾಗುತ್ತದೆ. ಈ ಮೂಲಕವಾಗಿ ಯಾವುದೇ ದಾಖಲೆಗಳು ಬೇಕು ಅಂದಾಗ ಇ-ಆಫೀಸ್ ಮೂಲಕ ಪಡೆಯಬಹುದು.
Advertisement
ಆರ್ಥಿಕ ನಷ್ಟದಲ್ಲಿ ಬಿಡಿಎ
ಪ್ರಸ್ತುತ ಬಿಡಿಎ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಿಡಿಎ ಖಾತೆಯಲ್ಲಿ ಕೇವಲ 5 ಕೋಟಿ ರೂಪಾಯಿ ಮಾತ್ರ ಇದೆ. 400 ಕೋಟಿ ಹಲವು ಕಡೆಗಳಿಂದ ಬರಬೇಕಿದ್ದು, 250 ಕೋಟಿ ಸಾಲವಿದೆ. ಪ್ರಾಧಿಕಾರದ ಆರ್ಥಿಕ ಸುಧಾರಣೆಗೆ ಕ್ರಮಕೈಗೊಳ್ಳಲಾಗಿದ್ದು, ಮಾರಾಟವಾಗದೇ ಉಳಿದಿರುವ ಸುಮಾರು 2 ಸಾವಿರ ಫ್ಲ್ಯಾಟ್‍ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಬಿಡಿಎ ಚಿಂತನೆ ನಡೆಸಿದೆ.