16.25 ಕೋಟಿಗೆ ಖರೀದಿಸಿದ ಆಟಗಾರ ಗಳಿಸಿದ್ದು 15 ರನ್‌, ಅಬ್ಬಬ್ಬಾ 1 ರನ್‌ ಬೆಲೆ 1.08 ಕೋಟಿ..!

Public TV
2 Min Read
Ben Stokes

ಮುಂಬೈ: ಭಾರೀ ನಿರೀಕ್ಷೆಯೊಂದಿಗೆ ದುಬಾರಿ ಮೊತ್ತಕ್ಕೆ ಇಂಗ್ಲೆಂಡ್‌ ತಂಡದ ಬೆನ್‌ಸ್ಟೋಕ್ಸ್‌ (Ben Stokes) ಆಟಗಾರನನ್ನ ಖರೀದಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡವು ಇದೀಗ ನಿರಾಸೆ ಅನುಭವಿಸಿದೆ. ಎರಡು ಪಂದ್ಯಗಳಲ್ಲಿ ಆಡಿದ ಸ್ಟೋಕ್ಸ್‌ ಗಳಿಸಿದ್ದು ಕೇವಲ 15 ರನ್‌ ಮಾತ್ರ. ಹೀಗಾಗಿ ಅವರು ಗಳಿಸಿದ ಒಂದೊಂದು ರನ್‌ ಬೆಲೆ 1.08 ಕೋಟಿ ಮೊತ್ತವನ್ನು ಸಿಎಸ್‌ಕೆ ಫ್ರಾಂಚೈಸಿ ಕೊಟ್ಟಂತಾಗಿದೆ.

Ben Stokes 2

ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes), ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡ ತೊರೆದು ತವರಿಗೆ ಮರಳಲು ಸಿದ್ಧರಾಗಿದ್ದಾರೆ. ತಂಡದ ಅಂತಿಮ ಲೀಗ್ ಪಂದ್ಯದ ಬಳಿಕ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಮುಂದಿನ ತಿಂಗಳು ಮಹತ್ವದ ಆಶಸ್‌ (Ashes) ಟೆಸ್ಟ್‌ ಸರಣಿ ನಡೆಯಲಿದ್ದು, ಇದಕ್ಕೆ ಸಿದ್ಧರಾಗುವ ಸಲುವಾಗಿ ಕೆಲ ಸಮಯ ವಿಶ್ರಾಂತಿ ಪಡೆಯಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಗಿಲ್‌ ಚೊಚ್ಚಲ ಶತಕ, ಶಮಿ, ಮೋಹಿತ್‌ ಬೆಂಕಿ ಬೌಲಿಂಗ್‌ – ಗುಜರಾತ್‌ ಪ್ಲೇ ಆಫ್‌ಗೆ, ಹೈದರಾಬಾದ್‌ ಮನೆಗೆ

Ben Stokes 3

2023 ಐಪಿಎಲ್‌ ಆವೃತ್ತಿಗೆ 2022ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಬರೋಬ್ಬರಿ 16.25 ಕೋಟಿ ರೂ.ಗೆ ಸ್ಟೋಕ್ಸ್‌ ಅವರನ್ನ ಸಿಎಸ್‌ಕೆ ತಂಡವು ಖರೀದಿಸಿತ್ತು. ಆದ್ರೆ 31 ವರ್ಷದ ಆಟಗಾರ ಸ್ಟೋಕ್ಸ್‌ ಕೇವಲ ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡು ಕ್ರಮವಾಗಿ 7 ಮತ್ತು 8 ರನ್‌ ಗಳಿಸಿದರು. ಒಂದೇ ಒಂದು ಓವರ್‌ ಬೌಲಿಂಗ್‌ ಮಾಡಿ 18 ರನ್‌ ಕೊಟ್ಟರು. ನಂತರ ಗಾಯಗೊಂಡ ಅವರು ಫಿಟ್‌ನೆಸ್‌ ಸಮಸ್ಯೆಗೆ ಒಳಗಾಗಿ ಪ್ಲೇಯಿಂಗ್‌ 11ನಿಂದ ಹೊರಗುಳಿದರು. ಇದನ್ನೂ ಓದಿ: ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

Ben Stokes

ಜೂನ್ 16ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿ ಆರಂಭವಾಗುತ್ತಿದ್ದು, ಸ್ಟೋಕ್ಸ್ ಶನಿವಾರ ಮಧ್ಯಾಹ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅಂತಿಮ ಲೀಗ್‌ ಪಂದ್ಯದ ಬಳಿಕ ಇಂಗ್ಲೆಂಡ್‌ಗೆ ಮರಳಲಿದ್ದಾರೆ. ಆಶಸ್‌ ಸರಣಿಗೆ ತಯಾರಿಯ ಭಾಗವಾಗಿ, ಇಂಗ್ಲೆಂಡ್ ತಂಡವು ಜೂನ್ 1ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಲಿದೆ. ದೀರ್ಘಕಾಲದ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಸ್ಟೋಕ್ಸ್, ಟೆಸ್ಟ್‌ ತಂಡಕ್ಕೆ ಮರಳಲು ಕೆಲ ಕಾಲ ಬಿಡುವು ಸಿಗುತ್ತದೆ ಎಂಬ ಉದ್ದೇಶದಿಂದ ಸಿಎಸ್‌ಕೆ ಕ್ಯಾಂಪ್‌ ತೊರೆಯಲು ನಿರ್ಧರಿಸಿದ್ದಾರೆ ಎಂದು ತಂಡದ ಆಪ್ತ ಮೂಲಗಳು ತಿಳಿಸಿವೆ.

Share This Article