ಸಿಡ್ನಿ: ಇಂಗ್ಲೆಂಡ್ (England) ತಂಡದ ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಫೀಲ್ಡಿಂಗ್ (Fielding) ಕಂಡು ಕ್ರಿಕೆಟ್ (Cricket) ಅಭಿಮಾನಿ ಬೆರಗಾಗಿದ್ದಾರೆ.
Advertisement
ಆಸ್ಟ್ರೇಲಿಯಾ (Australia) ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಮೂಲಕ ಸಿಕ್ಸರ್ ಹೋಗುತ್ತಿದ್ದ ಬಾಲ್ ತಡೆದು 4 ರನ್ ಉಳಿಸಿ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್
Advertisement
Advertisement
ಆಸ್ಟ್ರೇಲಿಯಾ ಇಂಗ್ಲೆಂಡ್ ನೀಡಿದ್ದ 179 ರನ್‍ಗಳನ್ನು ಚೇಸಿಂಗ್ ಮಾಡುತ್ತಿತ್ತು. 12 ಓವರ್‌ನಲ್ಲಿ ಮಿಚೆಲ್ ಮಾರ್ಷ್, ಸ್ಯಾಮ್ ಕರನ್ ಎಸೆತವನ್ನು ಸಿಕ್ಸರ್‌ಗಟ್ಟಲು ಬಿಗಿಯಾಗಿ ಬಾರಿಸಿದರು. ಈ ವೇಳೆ ಲಾಂಗ್‍ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೋಕ್ಸ್ ಸಿಕ್ಸ್ ಹೋಗುತ್ತಿದ್ದ ಬಾಲನ್ನು ಹಾರಿ ಹಿಡಿದು ಬೌಂಡರಿ ರೋಪ್‍ನಿಂದ ಹೊರ ಎಸೆದರು. ಈ ಮೂಲಕ 4 ರನ್ ಸೇವ್ ಮಾಡಿದರು. ಇದೀಗ ಸ್ಟೋಕ್ಸ್ ಮಿಂಚಿನ ಫೀಲ್ಡಿಂಗ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ. ಇದನ್ನೂ ಓದಿ: ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC
Advertisement
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಟೋಕ್ಸ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡದಿದ್ದರೂ, ಭರ್ಜರಿ ಫೀಲ್ಡಿಂಗ್ ಮೂಲಕ ಮಿಂಚುತ್ತಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ (T20 World Cup) ಆರಂಭಕ್ಕೂ ಮುನ್ನ ಮತ್ತೊಮ್ಮೆ ತಮ್ಮ ಫೀಲ್ಡಿಂಗ್ ಸಾಮರ್ಥ್ಯ ಸಾಭೀತು ಪಡಿಸಿದ್ದಾರೆ.
YOU CAN NOT DO THAT BEN STOKES ???? pic.twitter.com/Y5nH6TtnJJ
— England's Barmy Army (@TheBarmyArmy) October 12, 2022
ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತು. 179 ರನ್‍ಗಳ ಗುರಿ ಪಡೆದ ಆಸ್ಟ್ರೇಲಿಯಾ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 170 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇತ್ತ ಇಂಗ್ಲೆಂಡ್ 8 ರನ್‍ಗಳ ಜಯದೊಂದಿಗೆ ಆಸ್ಟ್ರೇಲಿಯಾಗೆ ತವರಿನ ನೆಲದಲ್ಲೇ ಟಕ್ಕರ್ ನೀಡಿದೆ.