ಬೆಂಗಳೂರು: ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಅವರನ್ನು ಕಟ್ಟಿ ಹಾಕುವ ಬಗ್ಗೆ ಬೌಲರ್ ಗಳಿಗೆ ಸಲಹೆ ನೀಡಿ ಇಂಗ್ಲೆಂಡ್ ತಂಡದ ಆಟಗಾರ, ಹಾಲಿ ರಾಜಸ್ಥಾನ ರಾಯಲ್ಸ್ ಬೌಲರ್ ಬೆನ್ ಸ್ಟೋಕ್ಸ್ ವಿಡಿಯೋವೊಂದರನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
1981 ರ ಆಸ್ಟ್ರೇಲಿಯಾ ತಂಡದ ಸಣ್ಣ ವಿಡಿಯೋವನ್ನು ಬೆನ್ ಸ್ಟೋಕ್ಸ್ ಪೋಸ್ಟ್ ಮಾಡಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಗಳಿಸುವ ಅಗತ್ಯವಿತ್ತು. ಈ ವೇಳೆ ಆಸೀಸ್ ಬೌಲರ್ ಟ್ರೆವರ್ ಚಾಪೆಲ್ ರನ್ ಉಳಿಸಲು ಅಂಡರ್ ಆರ್ಮ್ ಬೌಲಿಂಗ್ ನಡೆಸಿದ್ದರು. ಸದ್ಯ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಬೆನ್ ಸ್ಟೋಕ್ಸ್ ತಮಾಷೆ ಮಾಡಿ ಬೌಲರ್ ಗಳ ಕಾಲೆಳೆದಿದ್ದಾರೆ.
Advertisement
https://twitter.com/benstokes38/status/987749945171107840?
Advertisement
ಸ್ಟೋಕ್ಸ್ ಅವರ ಈ ಟ್ವೀಟ್ ಗೆ ಆರ್‌ಸಿಬಿ ಅಭಿಮಾನಿಗಳು ತಮ್ಮದೇ ಪ್ರತಿಕ್ರಿಯೆ ನೀಡಿ ಮರು ಟ್ವೀಟ್ ಮಾಡುತ್ತಿದ್ದಾರೆ. ಸದ್ಯ ಸ್ಟೋಕ್ಸ್ ಅವರ ಟ್ವೀಟ್ ಗೆ 11 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದ್ದರೆ, 3 ಸಾವಿರ ಹೆಚ್ಚು ರಿಟ್ವೀಟ್ ಆಗಿದೆ.
Advertisement
90* is highest score for ABD when chasing in IPL.
Previous: 89* v SRH, 2014. #RCBvDD
— Bharath Seervi (@SeerviBharath) April 21, 2018
Advertisement
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕ್ರೀಸ್‍ಗಿಳಿದ ಕ್ಷಣದಿಂದಲೇ ಅಬ್ಬರದ ಆಟ ಆರಂಭಿಸಿದ ಎಬಿ ಡಿವಿಲಿಯರ್ಸ್ ಆಟಕ್ಕೆ ಆರ್‌ಸಿಬಿ ತಂಡ ಗೆಲುವಿನ ಸಂಭ್ರಮ ಆಚರಿಸಿದೆ. ಕೇವಲ 39 ಎಸೆತಗಳಲ್ಲಿ 90 ರನ್ ಸಿಡಿಸಿ ಎಬಿ ಡಿವಿಲಿಯರ್ಸ್ ಔಟಾಗದೆ ಉಳಿದರು. ಇದರಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿದ್ದು, ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳ ಸಂತಸ ಇಮ್ಮಡಿಯಾಗುವಂತೆ ಮಾಡಿದ್ದರು. ಸದ್ಯ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಜಯ ಸಾಧಿಸಿ ಗೆಲುವಿನ ಹಾದಿಗೆ ಮರಳಿದೆ.
RCB have won 2 matches and ABD have scored 50s in both.
Last year ABD was part of 9 matches and RCB lost all of them! #RCBvDD
— Bharath Seervi (@SeerviBharath) April 21, 2018
Mr 360 Degree @ABdeVilliers17 One and only word for you (FREAK) absolutely beauty ????????????????????@RCBTweets vs @DelhiDaredevils @IPL
— Harbhajan Turbanator (@harbhajan_singh) April 21, 2018