ಲಾಹೋರ್: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ (ICC Champions Trophy) ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳು ಆಗುತ್ತಲೇ ಇವೆ. ಇಂದು (ಫೆ.22) ಲಾಹೋರ್‌ನ ಗಡಾಫಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ (Ben Duckett) ಇತಿಹಾಸ ನಿರ್ಮಿಸಿದ್ದಾರೆ.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ (England) ಪರ ಆರಂಭಿಕನಾಗಿ ಕಣಕ್ಕಿಳಿದ ಡಕೆಟ್, ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತಿಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 146 ರನ್ (129 ಎಸೆತ, 3 ಸಿಕ್ಸರ್, 14 ಬೌಂಡರಿ) ಗಳಿಸುತ್ತಿದ್ದಂತೆ ಟ್ರೋಫಿ ಇತಿಹಾಸದಲ್ಲೇ ಅತಿಹೆಚ್ಚು ರನ್ ಗಳಿಸಿದ ಸಾಧನೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ದಾದಾ ಸೌರವ್ ಗಂಗೂಲಿ ಅವರ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದಾರೆ.
Advertisement
ನ್ಯೂಜಿಲೆಂಡ್ ಮಾಜಿ ಕ್ರಿಕೆಟರ್ ನಾಥನ್ ಆಸ್ಟಲ್ 2004ರಲ್ಲಿ ಯುಎಸ್‌ಎ ವಿರುದ್ಧ, ಜಿಂಬಾಬ್ವೆ ಮಾಜಿ ಆಟಗಾರ ಆಂಡಿ ಫ್ಲವರ್ ತಲಾ 145 ರನ್ ಗಳಿಸಿ ಮೊದಲ ಎರಡು ಸ್ಥಾನಗಳಲ್ಲಿದ್ದರು. ಆ ಬಳಿಕ ಟೀಂ ಇಂಡಿಯಾ ಸ್ಟಾರ್ಸ್ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ತಲಾ 141 ರನ್ ಗಳಿಸಿ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದರು. ಇದೀಗ ಬೆನ್ ಡಕೆಟ್ ಇವರೆಲ್ಲರ ದಾಖಲೆಗಳನ್ನ ಉಡೀಸ್ ಮಾಡಿದ್ದಾರೆ.
Advertisement
Advertisement
ಕೊನೆಯವರೆಗೂ ಹೋರಾಡಿದ ಡಕೆಟ್ 115.38 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 165 ರನ್ (143 ಎಸೆತ, 17 ಬೌಂಡರಿ, 3 ಸಿಕ್ಸರ್) ಗಳಿಸಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ಯಶಸ್ವಿಯಾಗಿ 300 ರನ್‌ಗಳ ಗಡಿ ದಾಟಿದೆ.
ಅತಿಹೆಚ್ಚು ರನ್ ಗಳಿಸಿದ ಟಾಪ್-5 ಸ್ಟಾರ್ಸ್
ಬೆನ್ ಡಕೆಟ್ – ಇಂಗ್ಲೆಂಡ್ – 165 ರನ್ (143 ಎಸೆತ) – 2025
ನಾಥನ್ ಆಸ್ಟಲ್ – ನ್ಯೂಜಿಲೆಂಡ್ – 145 ರನ್ (151 ಎಸೆತ) – 2004
ಆಂಡಿ ಫ್ಲವರ್ – ಜಿಂಬಾಬ್ವೆ – 145 ರನ್ (164 ಎಸೆತ) – 2002
ಸೌರವ್ ಗಂಗೂಲಿ – ಭಾರತ – 141 ರನ್ (142 ಎಸೆತ) – 2000
ಸಚಿನ್ ತೆಂಡೂಲ್ಕರ್- ಭಾರತ – 141 ರನ್ (128 ಎಸೆತ) – 1998