ಹಾಸನ: ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಸಕಲೇಶಪುರದ ಉಪವಿಭಾಗಾಧಿಕಾರಿ ಕಚೇರಿಯ (Sakleshpur AC Office) ವಾಹನ ಹಾಗೂ ಪೀಠೋಪಕರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
1994 ರಲ್ಲಿ ಬೇಲೂರು ಚನ್ನಕೇಶವ ದೇವಾಲಯಕ್ಕೆ (Belur Chennakeshava Temple) ಹೊಂದಿಕೊಂಡಿದ್ದ ಸುದೀಂದ್ರ ಹಾಗೂ ರಾಮು ಎಂಬವರ 800 ಚದರ ಅಡಿ ಭೂಮಿಯನ್ನು ಹೋಟೆಲ್ ನಿರ್ಮಾಣಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಈ ವೇಳೆ ಪ್ರತಿ ಚದರ ಅಡಿಗೆ ಇಲಾಖೆ 277 ರೂ.ಗಳಂತೆ ಪರಿಹಾರ ನೀಡಿತ್ತು. ಹೆಚ್ಚಿನ ಪರಿಹಾರ ನೀಡುವಂತೆ ಸುದೀಂದ್ರ ಹಾಗೂ ರಾಮು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: 2 ತಿಂಗಳಿಂದ ಊರ ಮಂದಿಗೆ ಒಂದೇ ಕಾಯಿಲೆ; ಆಸ್ಪತ್ರೆಗೆ ತೋರಿಸಿದರೂ ಪ್ರಯೋಜನವಿಲ್ಲ – ಚಿಕ್ಕಮಗಳೂರಿನ ಗ್ರಾಮದಲ್ಲಿ ಆತಂಕ
ಸುದೀರ್ಘ ವಿಚಾರಣೆ ನಂತರ ಚದರ ಅಡಿಗೆ 950 ರೂ.ನಂತೆ 1.75 ಕೋಟಿ ರೂ. ಪರಿಹಾರ ನೀಡುವಂತೆ ಅಂದಿನ ಭೂ ಸ್ವಾಧೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶಿಸಿತ್ತು. ತೀರ್ಪು ಪ್ರಕಟಗೊಂಡು 7 ವರ್ಷ ಕಳೆದರೂ ಪರಿಹಾರ ನೀಡದೆ ಇರುವುದರಿಂದ ಉಪವಿಭಾಗಾಧಿಕಾರಿ ಕಚೇರಿ ಜಪ್ತಿಗೆ ಬೇಲೂರು ನ್ಯಾಯಾಲಯ (Belur Court) ಆದೇಶಿಸಿತ್ತು. ಆದೇಶದ ಅನ್ವಯ 2 ಲಾರಿಗಳಲ್ಲಿ ಅಧಿಕಾರಿಗಳು ಕಚೇರಿಯ ಪೀಠೋಪಕರಣಗಳನ್ನು ತುಂಬಿಕೊಂಡು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ.
ಭೂಮಿ ಕಳೆದುಕೊಂಡವರ ಪರ ಕೆ.ಎಲ್.ನಟರಾಜ್ ವಾದ ಮಂಡಿಸಿದ್ದರು. ಇದನ್ನೂ ಓದಿ: ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನಸ್ಮೃತಿ ಇಲ್ಲ: ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟನೆ