ಶಿವಮೊಗ್ಗ: 2019ರ ಚುನಾವಣೆಯಲ್ಲಿ ನಾವು ರಾಘವೇಂದ್ರ ಅವರನ್ನು ಸೋಲಿಸದೇ ಇದ್ದರೆ ನಾನು ರಾಜಕೀಯದಲ್ಲಿ ಇರಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗದಲ್ಲಿ ಇಂದು ಶಪಥ ಕೈಗೊಂಡಿದ್ದಾರೆ.
ಲೋಕಸಭಾ ಉಪಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಡಿಮೆ ಅಂತರದಲ್ಲಿ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ. ಏಳು ಜನ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿ ಮೈತ್ರಿಕೂಟ ಬಿಜೆಪಿಗೆ ಪಾಠ ಕಲಿಸಿದೆ. ಇದು ಕಾರ್ಯಕರ್ತರ ಶ್ರಮವೇ ಹೊರತು ಯಾವುದೇ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಟಾಂಗ್ ನೀಡಿದರು.
Advertisement
Advertisement
ಬಿಜೆಪಿಯ ಮುಖಂಡರು ಅಧಿಕಾರ ಹಾಗೂ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಅರೋಪ ಮಾಡುತ್ತಿದ್ದಾರೆ. ಅಪ್ಪ ಮಗನ ಹತ್ತಿರ ಇನ್ನೂ ಐದಾರು ಚುನಾವಣೆ ಮಾಡುವಷ್ಟು ಹಣವಿದೆ. ಅವರೇ ಹಣ ಹಂಚಿಕೆ ಮಾಡಿದ್ದಾರೆ. ಆಪರೇಷನ್ ಕಮಲ ಎಂದು ಹೊರಟವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಜನ ತಿರುಗೇಟು ನೀಡಿದ್ದಾರೆ ಎಂದರು.
Advertisement
ಇದೇ ವೇಳೆ ಬಿಜೆಪಿ ಮುಖಂಡ ಹಾಲಪ್ಪ ಅವರ ಬಗ್ಗೆ ಮಾತನಾಡಿದ ಗೋಪಾಲಕೃಷ್ಣ ಅವರು, ಹಾಲಪ್ಪ ಬಗ್ಗೆ ಮಾತನಾಡಲು ನಾಚಿಕೆಯಾಗುತ್ತದೆ. ಅವರ ಕುಟುಂಬ ಏನು ಎಂದು ಎಲ್ಲರಿಗೂ ಗೊತ್ತು. ಕಾಮಾಲೆ ಕಣ್ಣಲ್ಲಿ ಕಂಡಿದೆಲ್ಲಾ ಹಳದಿ ಎಂದು ಹರತಾಳು ಹಾಲಪ್ಪರನ್ನು ಲೇವಡಿ ಮಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv