ನಾರ್ವೆ: ಕಳೆದ ವಾರ ನಾರ್ವೆಯಲ್ಲಿ ಬೆಲುಗ ವೇಲ್ ಒಂದು ಆಳದ ನೀರಿನಲ್ಲಿ ಮಹಿಳೆಯೊಬ್ಬರು ಬೀಳಿಸಿದ್ದ ಮೊಬೈಲ್‍ನನ್ನು ನೀರಿನಿಂದ ವಾಪಾಸ್ ತಂದು ಕೊಟ್ಟಿದೆ. ಈ ತಿಮಿಂಗಲದ ಮೊಬೈಲ್ ತಂದುಕೊಟ್ಟ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋಗೆ ಫಿದಾ ಆಗಿದ್ದಾರೆ.
ಹೌದು. ಸದ್ಯ ಬೆಲುಗ ತಿಮಿಂಗಿಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೆಮಸ್ ಆಗಿದೆ. ನಾರ್ವೆಯಲ್ಲಿ ಆಕಸ್ಮಿಕವಾಗಿ ಮಹಿಳೆಯ ಫೋನ್ ನೀರಿನಲ್ಲಿ ಬಿದ್ದಿತ್ತು. ಈ ವೇಳೆ ಬೆಲುಗ ತಿಮಿಂಗಲವೊಂದು ನೀರಿನಲ್ಲಿ ಬಿದ್ದಿದ್ದ ಫೊನ್‍ನನ್ನು ಹುಡುಕಿ, ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ವಾಪಾಸ್ ಮಹಿಳೆಗೆ ತಂದು ಕೊಟ್ಟಿದೆ. ಈ ಅಪರೂಪದ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Advertisement
Advertisement
ಈ ವಿಡಿಯೋದಲ್ಲಿ ತಿಮಿಂಗಲ ತನ್ನ ಬಾಯಲ್ಲಿ ಮೊಬೈಲ್‍ನನ್ನು ಕಚ್ಚಿಕೊಂಡು ನೀರಿಂದ ಮೇಲೆ ಬಂದು ಮಹಿಳೆಗೆ ಫೋನ್ ಕೊಟ್ಟು ನಗುಬೀರಿದ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕ್ಯೂಟ್ ವಿಡಿಯೋ ಸದ್ಯ ನೆಟ್ಟಿಗರ ಮನ ಗೆದ್ದಿದೆ. ಮಾನವ ಸ್ನೇಹಿಯಾಗಿರುವ ಈ ಬೆಲುಗ ತಿಮಿಂಗಲ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೆಮಸ್ ಆಗಿದ್ದು, ವಿಡಿಯೋ ನೋಡಿದವರು ಅಚ್ಚರಿ ಪಟ್ಟಿದ್ದಾರೆ. ಇನ್ನೂ ಕೆಲವರು ಈ ತಿಮಿಂಗಲ ರಷ್ಯಾದ ಗೂಡಚಾರಿ, ಇದಕ್ಕೆ ವಿಶೇಷ ತರಬೇತಿ ನೀಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ.
Advertisement
Advertisement
ಅದೇನೆ ಆಗಲಿ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಈ ತಿಮಿಂಗಲದ ವಿಡಿಯೋ ನೋಡಿದವರು ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದು, ಈ ತಿಮಿಂಗಲದ ವಿಡಿಯೋಗೆ ಫಿದಾ ಆಗಿದ್ದಾರೆ.